ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಣಕಾಲಿಗೆ ಗಾಯ: ಮೊದಲ ಟೆಸ್ಟ್‌ನಿಂದ ಹೊರಬಿದ್ದ ಆಲ್‌ರೌಂಡರ್ ಅಕ್ಷರ್ ಪಟೇಲ್

Last Updated 5 ಫೆಬ್ರುವರಿ 2021, 3:13 IST
ಅಕ್ಷರ ಗಾತ್ರ

ಚೆನ್ನೈ: ಮೊಣಕಾಲಿನಗಾಯಕ್ಕೆ ತುತ್ತಾಗಿರುವ ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ,

ಗುರುವಾರ ನಡೆದ ಅಭ್ಯಾಸದ ವೇಳೆ ಎಡಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡ ಬಗ್ಗೆ 27 ವರ್ಷದ ಅಕ್ಷರ್ ಪಟೇಲ್ ತಂಡದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು.

"ಅಕ್ಷರ್ ಪಟೇಲ್ ಗಾಯದ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡವು ಪರೀಕ್ಷೆ ನಡೆಸುತ್ತಿದೆ. ಅವರ ವಿವರವಾದ ವರದಿಗಳು ಕಾಯುತ್ತಿದ್ದೇವೆ. ಹಾಗಾಗಿ, ಆರಂಭಿಕ ಪಂದ್ಯದ ಆಯ್ಕೆಗೆ ಅವರು ಲಭ್ಯವಿರುವುದಿಲ್ಲ" ಎಂದು ಭಾರತೀಯ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರ ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಸ್ಪಿನ್ನರ್‌ಗಳಾದ ಶಹಬಾಜ್ ನದೀಮ್ ಮತ್ತು ರಾಹುಲ್ ಚಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಆಸ್ಟ್ರೇಲಿಯಾದಲ್ಲಿ ಅಭೂತಪೂರ್ವ ಸರಣಿ ಗೆಲುವಿನ ಗುಂಗಿನಲ್ಲಿರುವಭಾರತ ತಂಡ ತವರು ನೆಲದಲ್ಲೂ ಗೆಲುವಿನ ಒಟ ಮುಂದುವರೆಸುವ ವಿಶ್ವಾಸದಲ್ಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಿಮ ಪಂದ್ಯಗಳಿಗೆ ಗೈರಾಗಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT