ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ 88 ವರ್ಷಗಳ ನಂತರ ಅಪರೂಪದ ಸಾಧನೆ ಮಾಡಿದ ಭಾರತ ತಂಡ

ಮಹಿಳಾ ಟೆಸ್ಟ್ ಕ್ರಿಕೆಟ್: ಕನ್ನಡತಿ ಶುಭಾ ಮಿಂಚು, ನಾಲ್ವರ ಅರ್ಧಶತಕ
Published 14 ಡಿಸೆಂಬರ್ 2023, 14:40 IST
Last Updated 14 ಡಿಸೆಂಬರ್ 2023, 14:40 IST
ಅಕ್ಷರ ಗಾತ್ರ

ನವಿ ಮುಂಬೈ: ಕರ್ನಾಟಕದ ಶುಭಾ ಸತೀಶ್ ಸೇರಿದಂತೆ ನಾಲ್ವರು ಬ್ಯಾಟರ್‌ಗಳು ಅರ್ಧಶತಕ ಗಳಿಸಿದ ಫಲವಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವು ಗುರುವಾರ ಇಂಗ್ಲೆಂಡ್ ವಿರುದ್ಧ ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನವೇ ದಾಖಲೆಯ ಮೊತ್ತ  ಪೇರಿಸಿತು.

ಮೊದಲ ದಿನವೇ ದೊಡ್ಡ ಮೊತ್ತ ಗಳಿಸಿದ ಎರಡನೇ ತಂಡ

ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡವು ದಿನದಾಟದ ಮುಕ್ತಾಯಕ್ಕೆ 94 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 410 ರನ್ ಗಳಿಸಿತು. ಪಂದ್ಯದ ಮೊದಲ ದಿನವೇ ದೊಡ್ಡ ಮೊತ್ತ ಗಳಿಸಿದ ಎರಡನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1935ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ 475 ರನ್ ಗಳಿಸಿತ್ತು.  ಅಲ್ಲದೇ ನಾಲ್ಕನೂರಕ್ಕೂ ಹೆಚ್ಚು ರನ್‌ ಪೇರಿಸಿದ ಎರಡನೇ ತಂಡವೂ ಭಾರತ.

ಆಸ್ಟ್ರೇಲಿಯಾ ಆಟಗಾರ್ತಿಯರ ಫೀಲ್ಡಿಂಗ್ ಲೋಪಗಳನ್ನು ಸಮರ್ಥವಾಗಿ ಬಳಸಿಕೊಂಡ ಆತಿಥೇಯ ತಂಡವು ದೊಡ್ಡ ಮೊತ್ತ ಪೇರಿಸಿದರು.  ಪ್ರವಾಸಿ ತಂಡದ ಫೀಲ್ಡರ್‌ಗಳು ನಾಲ್ಕು ಕ್ಯಾಚ್ ಕೈಚೆಲ್ಲಿದರು. ಅದರಲ್ಲಿ ಜೀವದಾನ ಪಡೆದ ಶುಭಾ, ಜೆಮಿಮಾ ಮತ್ತು ಯಷ್ಟಿಕಾ  ತಂಡಕ್ಕೆ ಮಹತ್ವದ ಕಾಣಿಕೆ ನೀಡಿದರು.

ಪಂದ್ಯದ ಮೊದಲ ಹತ್ತು ಓವರ್‌ಗಳಾಗುವಷ್ಟರಲ್ಲಿಯೇ ಆರಂಭಿಕ ಬ್ಯಾ ಟರ್‌ಗಳಾದ ಸ್ಮೃತಿ ಮಂದಾನ (17 ರನ್) ಮತ್ತು ಶಫಾಲಿ ವರ್ಮಾ (19 ರನ್) ಅವರು ಔಟಾದರು. ಎರಡನೇ ಓವರ್‌ನಲ್ಲಿ ಸ್ಮೃತಿಗೂ ಒಂದು ಜೀವದಾನ ಲಭಿಸಿತ್ತು. 

ಸಂಕಷ್ಟದ ಸಂದರ್ಭದಲ್ಲಿ ಜೊತೆಯಾದ ಶುಭಾ (69; 76ಎ, 4X13) ಮತ್ತು ಜೆಮಿಮಾ ರಾಡ್ರಿಗಸ್ (68; 99ಎ, 4X11) ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 125 ರನ್‌ ಸೇರಿಸಿದರು. 33ನೇ ಓವರ್‌ನಲ್ಲಿ ಶುಭಾ ವಿಕೆಟ್ ಉರುಳಿಸಿದ ಎಕ್ಸೆಲ್‌ಸ್ಟೋನ್ ಅವರು ಜೊತೆಯಾಟ ಮುರಿದರು. ಐದು ಓವರ್‌ಗಳ ನಂತರ ಜೆಮಿಮಾ ಕೂಡ ಔಟಾದರು.

ಈ ಹಂತದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ (49; 81ಎ) ಮತ್ತು ಯಷ್ಟಿಕಾ ಭಾಟಿಯಾ (66; 88ಎ, 4X10, 6X1) ಶತಕದ ಜೊತೆಯಾಟವಾಡಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಸೇರಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.  ರನ್‌ ಔಟ್ ಆದ ಹರ್ಮನ್‌ಪ್ರೀತ್, ಕೇವಲ ಒಂದು ರನ್ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಕೆಲಹೊತ್ತಿನ ನಂತರ ಯಷ್ಟಿಕಾ ಅವರ ವಿಕೆಟ್ ಕಬಳಿಸಿದ ಚಾರ್ಲಿ ಡೀನ್ ಸಂಭ್ರಮಿಸಿದರು. 

ಆದರೆ ಇನಿಂಗ್ಸ್ ಕಟ್ಟುವ ಹೊಣೆ ಹೊತ್ತ ದೀಪ್ತಿ ಶರ್ಮಾ (ಬ್ಯಾಟಿಂಗ್ 60; 95ಎ, 4X9, 6X1) ಕೂಡ ಅರ್ಧಶತಕ ಬಾರಿಸಿದರು. ಅವರಿಗೆ ಸ್ನೇಹ ರಾಣ (30; 73ಎ) ಉತ್ತಮ ಜೊತೆ ನೀಡಿದರು. ಏಳನೇ ವಿಕೆಟ್‌ ಜೊತೆಯಾಟದಲ್ಲಿ 92 ರನ್‌ ಸೇರಿಸಿದರು. ನಾಲ್ಕನೂರರ ಗಡಿ ದಾಟಿಸಿದರು. ದಿನದಾಟದ ಮುಕ್ತಾಯಕ್ಕೆ ದೀಪ್ತಿ ಮತ್ತು ಪೂಜಾ ವಸ್ತ್ರಕರ್ (ಬ್ಯಾಟಿಂಗ್ 4) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ: 94 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 410 (ಶುಭಾ ಸತೀಶ್ 69, ಜೆಮಿಮಾ ರಾಡ್ರಿಗಸ್ 68, ಹರ್ಮನ್‌ಪ್ರೀತ್ ಕೌರ್ 49, ಯಷ್ಟಿಕಾ ಭಾಟಿಯಾ 66, ದೀಪ್ತಿ ಶರ್ಮಾ ಬ್ಯಾಟಿಂಗ್ 60, ಸ್ನೇಹಾ ರಾಣಾ 30, ಲಾರೆನ್ ಬೆಲ್ 64ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT