ಶನಿವಾರ, ಜೂನ್ 19, 2021
26 °C

ಪಿಂಕ್‌ ಟೆಸ್ಟ್: ಕೋಲ್ಕತ್ತ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಗಂಗೂಲಿ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಭಾರತೀಯ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ಭಾರತದಲ್ಲಿ ನಡೆಯುತ್ತಿರುವ ಮೊದಲ ಗುಲಾಬಿ ಚೆಂಡಿನ ಟೆಸ್ಟ್‌ ಪಂದ್ಯದ ಹಿನ್ನೆಲೆಯಲ್ಲಿ ಉತ್ಸುಕರಾಗಿ ಇಲ್ಲಿನ ಸಿಹಿತಿನಿಸುಗಳು ಗುಲಾಬಿ ಬಣ್ಣಕ್ಕೆ ತಿರುಗಿವೆ ಎಂದು ಟ್ವೀಟ್‌ ಮಾಡಿದ್ದಾರೆ.

ಇಲ್ಲಿನ ಸ್ಥಳೀಯ ಗುಲಾಬಿ ಬಣ್ಣದ ತಿನಿಸು ಸಂದೇಶ್‌ ಫೋಟೋವನ್ನು ಅವರು ಈ ಟೆಸ್ಟ್‌ ಹಿನ್ನೆಲೆಯಲ್ಲಿ ಶೇರ್ ಮಾಡಿದ್ದಾರೆ. 

ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಮೊದಲ ಹಗಲೂ–ರಾತ್ರಿ, ಗುಲಾಬಿ ಚೆಂಡಿನಲ್ಲಿ ನಡೆಯಲಿರುವ ಟೆಸ್ಟ್‌ ಹಿನ್ನೆಲೆಯಲ್ಲಿ ತಯಾರಿಸಲಾದ ವಿಶೇಷ ಸಿಹಿ ತಿಂಡಿಯ ಫೋಟೋವನ್ನು ಟ್ವೀಟ್‌ ಮಾಡಿದ ಅವರು ಇಲ್ಲಿ ಎಲ್ಲಾ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಹೇಳಿದ್ದಾರೆ. 

ನಗರವು ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಗಂಗೂಲಿ ಟ್ವೀಟ್‌ ಮಾಡಿದ್ದು ಇದಕ್ಕೆ ಗುಲಾಬಿ ಬಣ್ಣದ ದೀಪಗಳಿಂದ  ಅಲಂಕಾರಗೊಂಡ ಕೋಲ್ಕತ್ತಾದ ಪ್ರಸಿದ್ದ ಕಟ್ಟಡಗಳ ಚಿತ್ರವನ್ನು ಹಂಚಿದ್ದರು.  

Well @bcci and @cab ... look forward to 5 days @JayShah pic.twitter.com/EbZigS3JMk

ಗುಲಾಬಿ ಬಣ್ಣದ ದೀಪಗಳಿಂದ ಕೂಡಿರುವ ತಮ್ಮ ಊರಿನ ವಿಡಿಯೊವನ್ನು ಶೇರ್‌ ಮಾಡಿದ್ದಾರೆ. 

ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ನೇತೃತ್ವದಲ್ಲಿ ವಿಶ್ವದ ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿನ ಹೊಸ ಬದಲಾವಣೆಯೂ ಪಂದ್ಯವನ್ನು ನೋಡುವವರ ಸಂಖ್ಯೆಯನ್ನು ಹೆಚ್ಚಿಸಬಹುದು ಮತ್ತು ಟಿವಿ ನೋಡುಗರ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ಹಗಲೂ–ರಾತ್ರಿ ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು 2015ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲಾಗಿದ್ದರೂ ಭಾರತದಲ್ಲಿ ಗಂಗೂಲಿ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಪಿಂಕ್‌ ಟೆಸ್ಟ್‌ ಪಂದ್ಯ ನಡೆಯುತ್ತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು