ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಭಾರತ–ಕಿವೀಸ್‌ ಟೆಸ್ಟ್

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 16ರಿಂದ 20ವರೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯ ನಡೆಯಲಿದೆ. 

ಭಾರತ ಪ್ರವಾಸ ಮಾಡಲಿರುವ ಕಿವೀಸ್ ತಂಡವು ಮೂರು ಟೆಸ್ಟ್‌ಗಳ ಸರಣಿ ಆಡಲಿದೆ. ಮೊದಲ ಪಂದ್ಯವು ಬೆಂಗಳೂರಿನಲ್ಲಿ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ಕೂಡ ಭಾರತ ಪ್ರವಾಸ ಮಾಡಲಿದ್ದು. ಟೆಸ್ಟ್‌ ಪಂದ್ಯ ಆಡಲಿದೆ.

ದಕ್ಷಿಣ ಆಫ್ರಿಕಾಕ್ಕೆ ಭಾರತ: ಈ ವರ್ಷದ ನವೆಂಬರ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಅಲ್ಲಿ ನಾಲ್ಕು ಟಿ20 ಪಂದ್ಯಗಳ ಸರಣಿಯಲ್ಲಿ ಆಡಲಿದೆ. 

ಡರ್ಬನ್ (ನ.8), ಜಿಟೆಬೆರಾ (ನ.10), ಸೆಂಚುರಿಯನ್ (ಡಿ 13) ಮತ್ತು ಜೋಹಾನ್ಸ್‌ಬರ್ಗ್‌ (ನ.15) ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ. 

ವೇಳಾಪಟ್ಟಿ: ಬಾಂಗ್ಲಾ ಎದುರು ಟೆಸ್ಟ್ ಪಂದ್ಯಗಳು: ಚೆನ್ನೈ (ಸೆ 19–23), ಕಾನ್ಪುರ (ಸೆ 27 ರಿಂದ ಅ.1).  ಟಿ20:  ಧರ್ಮಶಾಲಾ (ಅ.6), ದೆಹಲಿ (ಅ.9), ಹೈದರಾಬಾದ್ (ಅ.12)

ನ್ಯೂಜಿಲೆಂಡ್ ಎದುರು ಟೆಸ್ಟ್: ಬೆಂಗಳೂರು (ಅ. 16ರಿಂದ 20), ಪುಣೆ (ಅ. 24 ರಿಂದ 28), ಮುಂಬೈ (ನ.1ರಿಂದ 5) 

ಇಂಗ್ಲೆಂಡ್ ವಿರುದ್ಧ ಟಿ20: ಚೆನ್ನೈ (ಜನವರಿ 22), ಕೋಲ್ಕತ್ತ (ಜ.25), ರಾಜ್‌ಕೋಟ್ (ಜ.28), ಪುಣೆ (ಜ. 31), ಮುಂಬೈ (ಫೆ. 2)  ಏಕದಿನ: ನಾಗಪುರ (ಫೆ.6), ಕಟಕ್ (ಫೆ. 9) ಮತ್ತು ಅಹಮದಾಬಾದ್ (ಫೆ 12)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT