ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಜಡೇಜ ಅವರು ತಮ್ಮ ಸಹ ಆಟಗಾರ ಮೊಹಮ್ಮದ್ ಸಿರಾಜ್ ಅವರು ಕೊಟ್ಟ ಮುಲಾಮನ್ನು ಎಡಗೈ ತೋರುಬೆರಳಿಗೆ ಉಜ್ಜಿಕೊಂಡಿರುವುದು ದಾಖಲಾಗಿದೆ. ಈ ವಿಡಿಯೊ ಕುರಿತು ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಜಡೇಜ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.