ಮೂರನೇ ಏಕದಿನ ಪಂದ್ಯ: ಟಾಸ್‌ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

ಶನಿವಾರ, ಮಾರ್ಚ್ 23, 2019
24 °C

ಮೂರನೇ ಏಕದಿನ ಪಂದ್ಯ: ಟಾಸ್‌ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

Published:
Updated:

ರಾಂಚಿ: ಇಲ್ಲಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್‌ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 251 ರನ್‌ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 242 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೂಲಕ ಭಾರತ 8 ರನ್‌ಗಳಿಂದ ಜಯ ಸಾಧಿಸಿತ್ತು. 

ಇದನ್ನೂ ಓದಿ: ಏಕದಿನ ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ರನ್‌ ರೋಚಕ ಜಯ 

ಈ ಸರಣಿಯ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಭಾರತ, ಇದರಲ್ಲೂ ಮುನ್ನಡೆ ಸಾಧಿಸಿದ್ದಲ್ಲಿ ಹ್ಯಾಟ್ರಿಕ್ ಸರಣಿಯ ಸಂತಸದಲ್ಲಿ ತೇಲಲಿದೆ. 

ಆಸ್ಟ್ರೇಲಿಯಾದ ಆ್ಯರನ್ ಫಿಂಚ್‌ ಹಾಗೂ ಉಸ್ಮಾನ್ ಖ್ವಾಜಾ ಆರಂಭಿಕ ಜೊತೆಯಾಟ ಮುಂದುವರೆದಿದೆ.

ಇದನ್ನೂ ಓದಿ: ಮೂರನೇ ಏಕದಿನ ಪಂದ್ಯ: ‘ಮಹಿ’ತವರಿನಲ್ಲಿ ಜಯದ ‘ಸಿಹಿಗನಸು’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !