ಲೀಡ್ಸ್: ಉತ್ತಮ ಮನರಂಜನೆ ಒದಗಿಸಿರುವ ಮೊದಲ ಟೆಸ್ಟ್ನಲ್ಲಿ ಏಳು ಶತಕಗಳು ಬಂದವು. ಆದರೆ ಬೆನ್ ಡಕೆಟ್ ಅವರ ಆಕರ್ಷಕ ಶತಕ ಈಗ ಅತ್ಯಂತ ಪ್ರಮುಖ ಪಾತ್ರ ವಹಿಸುವಂತೆ ಕಾಣುತ್ತಿದೆ. ಇದರಿಂದ ಇಂಗ್ಲೆಂಡ್ ತಂಡ ಹೆಡಿಂಗ್ಲೆಯಲ್ಲಿ ಭಾರತದ ವಿರುದ್ಧ ಅಮೋಘ ಜಯಗಳಿಸುವ ಹಾದಿಯಲ್ಲಿದೆ.

ಕೋಚ್ ಬ್ರೆಂಡನ್ ಮೆಕ್ಕಲಂ ಮತ್ತು ನಾಯಕ ಬೆನ್ ಸ್ಟೋಕ್ಸ್ ಅವರ ಆಕ್ರಮಣಕಾರಿ ತಂತ್ರಗಾರಿಕೆಯ ಕ್ರಿಕೆಟ್ನಲ್ಲಿ ಡಕೆಟ್ ಅವರದು ಪ್ರಮುಖ ಪಾತ್ರ. ಅವರು ವೈಫಲ್ಯದ ಚಿಂತೆಯಿಲ್ಲದೇ ಆಡಿ ಅಚ್ಚುಕಟ್ಟಾದ 149 ರನ್ (170ಎ, 4x21, 6x1) ಪೋಣಿಸಿದರು. ಚಹ ವಿರಾಂದ ವೇಳೆಗೆ ಇಂಗ್ಲೆಂಡ್ 58.3 ಓವರುಗಳಲ್ಲಿ 4 ವಿಕೆಟ್ಗೆ 267 ರನ್ ಗಳಿಸಿದೆ. ಗೆಲುವಿಗೆ 102 ರನ್ಗಳಷ್ಟೇ ದೂರವಿದೆ.

ಇಂಗ್ಲೆಂಡ್ ಹಾದಿ ಇನ್ನೂ ಸವೆಯಬೇಕಿದ್ದರೂ ಅದು 1–0 ಮುನ್ನಡೆ ಪಡೆದರೆ, ಡಕೆಟ್ ನಿರ್ವಿವಾದವಾಗಿ ಪಂದ್ಯದ ಹೀರೊ ಎನಿಸಲಿದ್ದಾರೆ. ಅವರು ಭಾರತದ ಬೌಲರ್ಗಳನ್ನು ವ್ಯವಸ್ಥಿತವಾಗಿ ಮಟ್ಟಹಾಕಿದರು. ಕೆಚ್ಚು ಮತ್ತು ದೃಢನಿರ್ಧಾರದಿಂದ ಆಡಿದ ಜಾಕ್ ಕ್ರಾಲಿ (65, 126ಎ) ಅವರಿಗೆ ಸಮರ್ಥವಾಗಿ ಬೆಂಬಲ ನೀಡಿದರು. ಇವರಿಬ್ಬರು ಮೊದಲ ವಿಕೆಟ್ಗೆ ಕೇವಲ 42.2 ಓವರುಗಳಲ್ಲಿ 188 ರನ್ ಸೇರಿಸಿ ತಂಡಕ್ಕೆ ಅಗತ್ಯವಿದ್ದ ಭದ್ರ ಬುನಾದಿ ಹಾಕಿದರು. ಇಂಥ ತುರಸಿನ ಪೈಪೋಟಿಯ ಪಂದ್ಯದಲ್ಲಿ ಅಗತ್ಯವಿರುವ ಶಿಸ್ತುಬದ್ಧ ದಾಳಿ ಭಾರತದ ಬೌಲಿಂಗ್ ಪಡೆಯಲ್ಲಿ ಕಾಣಲಿಲ್ಲ.

ಏಷ್ಯಾ ಉಪಖಂಡದ ಪಿಚ್ಗಳ ರೀತಿ ಕೊನೆಯ ದಿನ ಇಲ್ಲಿನ ಪಿಚ್ ವರ್ತಿಸಲಿಲ್ಲ. ಒಣ ಪಿಚ್ನಲ್ಲಿ ವಿರಳವೆಂಬಂತೆ ಕೆಲವು ಎಸೆತಗಳು ಮಾತ್ರ ಎಗರಿಬಂದವು. ಅಗ್ರಗಣ್ಯ ಬೌಲರ್ ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬಿಗುವಾಗಿಯೇ ಬೌಲಿಂಗ್ ಮಾಡಿದರು. ಅವರು ಬ್ಯಾಟ್ಸಮನ್ನರ ಸಹನೆ ಪರೀಕ್ಷಿಸಿದರು. ಕೆಲವು ಎಸೆತಗಳು ಡಕೆಟ್ ಮತ್ತು ಕ್ರಾಲಿ ಅವರ ಬ್ಯಾಟಿನಂಚಿಗೆ ಮುತ್ತಿಕ್ಕಿದರೂ ದುರದೃಷ್ಟವಶಾತ್ ವಿಕೆಟ್ ಸಿಗಲಿಲ್ಲ.

ಆದರೆ ಪ್ರಸಿದ್ಧ ಕೃಷ್ಣ ಮತ್ತು ರವೀಂದ್ರ ಜಡೇಜ ದಾಳಿಗಿಳಿಯುತ್ತಿದ್ದಂತೆ ಇಬ್ಬರೂ ರನ್ವೇಗ ಹೆಚ್ಚಿಸಲು ತೊಡಗಿದರು. ಲಂಚ್ ವೇಳೆಗೆ ಮೊತ್ತ 30 ಓವರುಗಳಲ್ಲಿ117/0. ಹೀಗಾಗಿ ಆತಿಥೇಯರ ಪಾಳೆಯದಲ್ಲಿ ಗೆಲುವಿನ ವಾಸನೆ ಬಡಿಯತೊಡಗಿತು. ಸಾಕಷ್ಟು ಸಮಯವಿದ್ದ ಕಾರಣ ಇಬ್ಬರೂ ಓವರಿಗೆ ನಾಲ್ಕರ ವೇಗದಲ್ಲಿ ರನ್ ಗಳಿಸಿದರು.

ಆದರೆ ಲಂಚ್ ನಂತರ ರನ್ ವೇಗ ಓವರಿಗೆ 5.50ರಂತೆ ನಾಗಾಲೋಟ ಪಡೆಯಿತು. ಕಟ್, ಪುಲ್, ಸ್ವೀಪ್, ರಿವರ್ಸ್ ಸ್ವೀಪ್ ಹೊಡೆತಗಳು ಹರಿಯತೊಡಗಿದವು. ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡದ ಉತ್ಸಾಹ ಕುಗ್ಗಿದಂತೆ ಕಂಡಿತು. ಡಕೆಟ್ ಅವರಿಗೆ 97 ರನ್ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ ಕ್ಯಾಚ್ ಬಿಟ್ಟರು.

ಆದರೆ ಪ್ರಸಿದ್ಧ ಕೃಷ್ಣ ಈ ಸಂದರ್ಭದಲ್ಲಿ ನೆರವಿಗೆ ಬಂದರು. ಮೊದಲು ದಂಡನೆಗೊಳಗಾಗಿದ್ದ ಅವರು ನಂತರ ಎರಡು ಓವರುಗಳ ಅಂತರದಲ್ಲಿ ಕ್ರಾಲಿ ಮತ್ತು ಓಲಿ ಪೋಪ್ ಅವರ ವಿಕೆಟ್ಗಳನ್ನು ಪಡೆದರು. ಈ ಪಂದ್ಯದಲ್ಲಿ ಪರದಾಡಿದ್ದ ಶಾರ್ದೂಲ್ ಠಾಕೂರ್ ಅವರು ಚಹಾಕ್ಕೆ ಸ್ವಲ್ಪ ಮೊದಲು, ಬಂಡೆಯಂತೆ ಬೇರೂರಿದ್ದ ಡಕೆಟ್ ಮತ್ತು ಅಪಾಯಕಾರಿ ಹ್ಯಾರಿ ಬ್ರೂಕ್ ಅವರ ವಿಕೆಟ್ಗಳನ್ನು ಪಡೆದರು.

ಲಂಚ್ ಮತ್ತು ಟೀ ಮಧ್ಯೆ ಅವಧಿಯಲ್ಲಿ ಕೆಲಕಾಲ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.