ಸೋಮವಾರ, ಡಿಸೆಂಬರ್ 5, 2022
27 °C
ರಾಹುಲ್, ಸೂರ್ಯ ಅಬ್ಬರದ ಅರ್ಧಶತಕ

ಗ್ರೀನ್‌ಫೀಲ್ಡ್‌: ಭಾರತದ ಬೌಲರ್‌ಗಳ ಮಿಂಚು; ಸಿಂಗ್ –ಚಾಹರ್ ಸ್ವಿಂಗ್‌ಗೆ ಒಲಿದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಎಡಗೈ ಮಧ್ಯಮವೇಗಿ ಆರ್ಷದೀಪ್ ಸಿಂಗ್ ಹಾಗೂ ದೀಪಕ್ ಚಾಹರ್ ಅವರ ಚುರುಕಿನ ದಾಳಿಯಿಂದಾಗಿ  ಭಾರತ ಕ್ರಿಕೆಟ್ ತಂಡವು ಬುಧವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ  ಬುಧವಾರ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ನಾಯಕ ರೋಹಿತ್ ಶರ್ಮಾ ಅವರ ಈ ನಿರ್ಧಾರಕ್ಕೆ ನಿರೀಕ್ಷೆಗೂ ಮೀರಿದ ಫಲ ದಕ್ಕಿತು.   ಆರ್ಷದೀಪ್ (32ಕ್ಕೆ3) ದೀಪಕ್ (24ಕ್ಕೆ2) ಅವರು ಆರಂಭದಲ್ಲಿಯೇ ಪೆಟ್ಟು ಕೊಟ್ಟರು.

 ದಕ್ಷಿಣ ಆಫ್ರಿಕಾ ತಂಡವು ಮೊದಲ  ಮೂರು ಓವರ್‌ಗಳು ಮುಗಿಯುವ ಮುನ್ನವೇ ಕೇವಲ ಒಂಬತ್ತು ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 106 ರನ್‌ ಗಳಿಸಿತು. ಈ ಸಣ್ಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 16.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 ರನ್‌ ಗಳಿಸಿತು. ಎಂಟು ವಿಕೆಟ್‌ಗಳಿಂದ ಗೆದ್ದಿತು. ದಕ್ಷಿಣ ಆಫ್ರಿಕಾ ಬೌಲರ್‌ಗಳ ಪ್ರಯತ್ನಕ್ಕೆ ಕೆ.ಎಲ್.ರಾಹುಲ್ (ಅಜೇಯ 51) ಹಾಗೂ ಸೂರ್ಯಕುಮಾರ್ ಯಾದವ್ (ಅಜೇಯ 50) ಅಡ್ಡಿಯಾದರು. ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ದೀಪಕ್–ಸಿಂಗ್ ಮಿಂಚು: ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್‌ನ  ಮೊದಲ ಓವರ್‌ನಲ್ಲಿ ದೀಪಕ್ ಪೆಟ್ಟುಕೊಟ್ಟರು. ಅವರ ಸ್ವಿಂಗ್‌ಗೆ  ತೆಂಬಾ ಬವುಮಾ ಔಟಾದರು. ಎರಡನೇ ಓವರ್‌ನಲ್ಲಿ ಆರ್ಷದೀಪ್ ಎಸೆತಗಳಿಗೆ  ಕ್ವಿಂಟನ್ ಡಿಕಾಕ್, ರಿಲಿ ರೊಸೊವ್ ಹಾಗೂ ಡೇವಿಡ್ ಮಿಲ್ಲರ್ ಪೆವಿಲಿಯನ್‌ ಸೇರಿದರು. ನಂತರದ ಓವರ್‌ನಲ್ಲಿಯೂ ದೀಪಕ್ ಮತ್ತೊಂದು ವಿಕೆಟ್ ಉರುಳಿಸಿದರು. 

‌ಆದರೆ ತುಸು ಹೋರಾಟ ತೋರಿದ ಏಡನ್ ಮರ್ಕರಂ (25; 24ಎ), ವೇಯ್ನ್ ಪಾರ್ನೆಲ್ (24; 37ಎ) ಹಾಗೂ ಕೊನೆಯಲ್ಲಿ ಮಿಂಚಿನ ಆಟವಾಡಿದ ಕೇಶವ್ ಮಹಾರಾಜ (41) ಅವರಿಂದಾಗಿ ತಂಡವು ಅತ್ಯಲ್ಪ ಮೊತ್ತಕ್ಕೆ ಕುಸಿಯುವುದು ತಪ್ಪಿತು. 

ಆಫ್‌ಸ್ಪಿನ್ನರ್ ಆರ್. ಅಶ್ವಿನ್‌ ಅವರಿಗೆ ವಿಕೆಟ್ ಲಭಿಸಲಿಲ್ಲ. ಆದರೆ, ನಾಲ್ಕು ಓವರ್‌ಗಳಲ್ಲಿ ಕೇವಲ ಎಂಟು ರನ್‌ ನೀಡಿದ ಅವರು ಒಂದು ಮೇಡನ್ ಕೂಡ ಮಾಡಿದರು.  ಅಕ್ಷರ್ ಕೂಡ ಉತ್ತಮ ಬೌಲಿಂಗ್ ಮಾಡಿದರು. 

ಜಸ್‌ಪ್ರೀತ್ ಬೂಮ್ರಾ ಗಾಯಗೊಂಡ ಕಾರಣ ವಿಶ್ರಾಂತಿ ಪಡೆದರು.  

ಸ್ಕೋರ್‌ ಕಾರ್ಡ್‌
ದಕ್ಷಿಣ ಆಫ್ರಿಕಾ 8ಕ್ಕೆ106 (20 ಓವರ್‌)

ಡಿಕಾಕ್ ಬಿ ಆರ್ಷದೀಪ್ 1 (4ಎ), ಬವುಮಾ ಬಿ ದೀಪಕ್ 0 (4ಎ), ರೊಸೊವ್ ಸಿ ಪಂತ್ ಬಿ ಆರ್ಷದೀಪ್ 0 (1ಎ), ಮರ್ಕರಂ ಎಲ್‌ಬಿಡಬ್ಲ್ಯು ಬಿ ಹರ್ಷಲ್ 25 (24ಎ, 4X3,6X1), ಮಿಲ್ಲರ್ ಬಿ ಆರ್ಷದೀಪ್ 0 (1ಎ), ಸ್ಟಬ್ಸ್ ಸಿ ಆರ್ಷದೀಪ್ ಬಿ ದೀಪಕ್ 0 (1ಎ), ಪಾರ್ನೆಲ್ ಸಿ ಸೂರ್ಯಕುಮಾರ್ ಬಿ ಅಕ್ಷರ್ 24 (37ಎ, 4X1, 6X1), ಮಹಾರಾಜ ಬಿ ಹರ್ಷಲ್ 41 (35ಎ, 4X5, 6X2), ರಬಾಡ ಔಟಾಗದೆ 7 (11ಎ), ಎನ್ರಿಚ್ ಔಟಾಗದೆ 2 (2ಎ)

ಇತರೆ 6 (ವೈಡ್ 6)

ವಿಕೆಟ್ ಪತನ: 1–1 (ತೆಂಬಾ ಬವುಮಾ; 0.6), 2–1 (ಕ್ವಿಂಟನ್ ಡಿಕಾಕ್; 1.2), 3–8 (ರಿಲಿ ರೊಸೊವ್; 1.5), 4–8 (ಡೇವಿಡ್ ಮಿಲ್ಲರ್;1.6), 5–9 (ಟ್ರಿಸ್ಟನ್ ಸ್ಟಬ್ಸ್;2.3), 6–42 (ಏಡನ್ ಮರ್ಕರಂ;7.6), 7–68 (ವೇಯ್ನ್‌ ಪಾರ್ನೆಲ್; 15.5), 8–101 (ಕೇಶವ್ ಮಹಾರಾಜ; 19.1)

ಬೌಲಿಂಗ್‌: ದೀಪಕ್ ಚಾಹರ್ 4–0–24–2, ಆರ್ಷದೀಪ್ ಸಿಂಗ್ 4–0–32–3, ಆರ್. ಅಶ್ವಿನ್ 4–1–8–0, ಹರ್ಷಲ್ ಪಟೇಲ್ 4–0–26–2, ಅಕ್ಷರ್ ಪಟೇಲ್ 4–0–16–1

ಭಾರತ 2ಕ್ಕೆ110 (16.4 ಓವರ್‌)

ರಾಹುಲ್ ಅಜೇಯ 51 (56ಎ, 4X2, 6X4), ರೋಹಿತ್ ಸಿ ಡಿಕಾಕ್ ಬಿ ರಬಾಡ 0 (2ಎ), ವಿರಾಟ್ ಸಿ ಡಿಕಾಕ್ ಬಿ ಎನ್ರಿಚ್ 3 (9ಎ), ಸೂರ್ಯಕುಮಾರ್‌ ಅಜೇಯ 50 (33ಎ, 4X5, 6X3)

ಇತರೆ 6 (ವೈಡ್ 6)

ವಿಕೆಟ್ ಪತನ: 1–9 (ರೋಹಿತ್ ಶರ್ಮಾ; 2.2), 2–17 (ವಿರಾಟ್ ಕೊಹ್ಲಿ; 6.1)

ಬೌಲಿಂಗ್‌: ಕಗಿಸೊ ರಬಾಡ 4–1–16–1, ವೇಯ್ನ್ ಪಾರ್ನೆಲ್ 4–0–14–0, ಎನ್ರಿಚ್ ನಾಕಿಯಾ 3–0–32–1, ತಬ್ರೇಜ್ ಶಮ್ಸಿ 2.4–0–27–0, ಕೇಶವ್ ಮಹಾರಾಜ 3–0–21–0

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು