ಪಾರ್ಲ್: ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ಭಾರತಕ್ಕೆ 297 ರನ್‌ಗಳ ಗುರಿ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ತೆಂಬಾ ಬವುಮಾ (110) ಮತ್ತು ಸಿ ವ್ಯಾನ್ ಡರ್ ಡಸೆನ್ ಔಟಾಗದೆ ಗಳಿಸಿದ ಸ್ಫೋಟಕ ಶತಕ(129)ದ ನೆರವಿನಿಂದ 50 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 296 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

6 ರನ್‌ಗೆ ಮಲನ್ ವಿಕೆಟ್ ಉರುಳಿದ ಬಳಿಕ ಎಚ್ಚರಿಕೆಯ ಆಟವಾಡಿದ ಆಫ್ರಿಕಾದ ಬ್ಯಾಟರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಒಂದೆಡೆ ತಾಳ್ಮೆಯ ಆಟವಾಡಿದ ಬವುಮಾ 143 ಎಸೆತಗಳಲ್ಲಿ 110 ರನ್ ಗಳಿಸಿದರು. ಮತ್ತೊಂದೆಡೆ ಅಬ್ಬರಿಸಿದ ಸಿ ವ್ಯಾನ್ ಡರ್ ಡಸೆನ್ 9 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 96 ಎಸೆತಗಳಲ್ಲಿ 129 ರನ್ ಸಿಡಿಸಿ ತಂಡದ ಸವಾಲಿನ ಮೊತ್ತಕ್ಕೆ ಕಾರಣದರು.

ಉಳಿದಂತೆ ಕ್ವಿಂಟನ್ ಡಿಕಾಕ್ 27 ರನ್ ಗಳಿಸಿದರು. ಭಾರತದ ಬೌಲರ್ ಬಸ್‌ಪ್ರೀತ್ ಬೂಮ್ರಾ 48 ರನ್ ನೀಡಿ 2 ವಿಕೆಟ್ ಪಡೆದರು.

ರೋಹಿತ್ ಶರ್ಮಾ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಉಪನಾಯಕ ಕೆ.ಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ: 296/4
ತೆಂಬಾ ಬವುಮಾ: 110
ಸಿ ವ್ಯಾನ್ ಡರ್ ಡಸೆನ್: ಔಟಾಗದೆ 129

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.