ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI: ಭಾರತಕ್ಕೆ ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಆಸರೆ

Last Updated 15 ಡಿಸೆಂಬರ್ 2019, 11:01 IST
ಅಕ್ಷರ ಗಾತ್ರ

ಚೆನ್ನೈ: ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆಶ್ರೇಯಸ್‌ ಅಯ್ಯರ್ ಮತ್ತು ರಿಷಭ್‌ ಪಂತ್‌ ಆಸರೆಯಾಗಿದ್ದು ಇಬ್ಬರು ಅರ್ಧ ಶತಕ ದಾಖಲಿಸಿದ್ದಾರೆ.

ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಅಯ್ಯರ್ ಮತ್ತು ಪಂತ್‌ ಬ್ಯಾಟಿಂಗ್‌ ಬಲದಿಂದ ಭಾರತ ಉತ್ತಮ ಮೊತ್ತದತ್ತ ದಾಪುಗಾಲು ಇಡುತ್ತಿದೆ. ಅಯ್ಯರ್‌ 70, ಪಂತ್‌ 60ರನ್‌ ಗಳಿಸಿ ಆಡುತ್ತಿದ್ದು ವಿಂಡೀಸ್‌ ಬೌಲರ್‌ಗಳನ್ನು ದಂಡಿಸುತ್ತಿದ್ದಾರೆ.

ಕೆ.ಎಲ್‌. ರಾಹುಲ್‌ ಮತ್ತು ನಾಯಕ ಕೊಹ್ಲಿ ಎರಡಂಕಿ ದಾಟದೇ ವಿಕೆಟ್‌ ಒಪ್ಪಿಸಿದರು. ಈ ವೇಳೆ ಬಂದ ಅಯ್ಯರ್ ಮತ್ತು ಪಂತ್‌ ಉತ್ತಮ ಜೊತೆಯಾಟದ ಮೂಲಕ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.ಶೆಲ್ಡನ್‌ ಕಾಟ್ರೆಲ್‌ ಉತ್ತಮ ದಾಳಿ ನಡೆಸುವ ಮೂಲಕ ಭಾರತವನ್ನು ಕಾಡಿದರು.ತಾಳ್ಮೆಯ ಆಟವಾಡಿದರೋಹಿತ್ ಶರ್ಮಾ 36 ರನ್‌ ಗಳಿಸಿ ಔಟಾದರು.

ಇತ್ತೀಚಿಗೆ ಭಾರತ 36ಓವರ್‌ಗಳಲ್ಲಿ 3ವಿಕೆಟ್‌ ಕಳೆದ ಕೊಂಡು 192ರನ್‌ ಗಳಿಸಿದೆ.ಟಾಸ್‌ ಗೆದ್ದವಿಂಡೀಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಮಾದರಿ ಯಾವುದೇ ಇರಲಿ, ತವರಿನ ಅಂಗಳದಲ್ಲಿ ತಾನೇ ಸಾಮ್ರಾಟ ಎಂಬುದನ್ನು ಈ ಋತುವಿನಲ್ಲೂ ಸಾಬೀತುಪಡಿಸಿರುವ ಭಾರತ ತಂಡ ಈಗ ಮತ್ತೊಂದು ಸರಣಿ ಜಯದ ಖುಷಿಯಲ್ಲಿದೆ.

ಈಗಾಗಲೇವೆಸ್ಟ್‌ ಇಂಡೀಸ್‌ ವಿರುದ್ಧ ಟ್ವೆಂಟಿ–20 ಸರಣಿ ಜಯಿಸಿ ಬೀಗುತ್ತಿರುವ ವಿರಾಟ್‌ ಕೊಹ್ಲಿ ಬಳಗ, ಈಗ ಅದೇ ತಂಡದ ಎದುರು ಏಕದಿನ ಸರಣಿಯಲ್ಲೂ ಸೆಣಸಲಿದೆ. ಈ ಋತುವಿನಲ್ಲಿ ಭಾರತ ತಂಡ ತವರಿನಲ್ಲಿ ಆಡುತ್ತಿರುವ ಕೊನೆಯ ಸರಣಿ ಇದಾಗಿದೆ.

ತಂಡಗಳು ಇಂತಿವೆ

ಭಾರತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಕೇದಾರ್‌ ಜಾಧವ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ದೀಪಕ್‌ ಚಾಹರ್‌, ಮೊಹಮ್ಮದ್‌ ಶಮಿ

ವೆಸ್ಟ್‌ ಇಂಡೀಸ್‌: ಕೀರನ್‌ ಪೊಲಾರ್ಡ್‌ (ನಾಯಕ), ಸುನಿಲ್‌ ಆ್ಯಂಬ್ರಿಸ್‌, ಶಾಯ್‌ ಹೋಪ್‌, ರಾಸ್ಟನ್‌ ಚೇಸ್‌, ಅಲಜಾರಿ ಜೋಸೆಫ್‌, ಶೆಲ್ಡನ್‌ ಕಾಟ್ರೆಲ್‌, ನಿಕೋಲಸ್‌ ಪೂರನ್‌, ಶಿಮ್ರೊನ್‌ ಹೆಟ್ಮೆಯರ್‌, ಜೇಸನ್‌ ಹೋಲ್ಡರ್‌, ಕಿಮೊ ಪಾಲ್‌ ಮತ್ತು ಹೇಡನ್‌ ವಾಲ್ಶ್‌ ಜೂನಿಯರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT