ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಗ್ಬಿ ದಿಗ್ಗಜನ ಪೆಂಟ್‌ಹೌಸ್ ವಿರಾಟ್ ಕೊಹ್ಲಿಗೆ

Last Updated 12 ನವೆಂಬರ್ 2020, 14:49 IST
ಅಕ್ಷರ ಗಾತ್ರ

ಸಿಡ್ನಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ರಗ್ಬಿ ದಂತಕಥೆ ಬ್ರಾಡ್ ಫಿಟ್ಲರ್ ಅವರಿಗೆ ಮೀಸಲಾದ ಪೆಂಟ್‌ಹೌಸ್‌ ಸ್ವೀಟ್‌ನಲ್ಲಿ ಪ್ರತ್ಯೇಕವಾಸ ಮಾಡಲಿದ್ದಾರೆ.

ಗುರುವಾರ ಸಿಡ್ನಿಗೆ ಬಂದಿಳಿದಿರುವ ಕೊಹ್ಲಿ ನಾಯಕತ್ವದ 25 ಆಟಗಾರರ ಭಾರತ ತಂಡವನ್ನು ಕೋವಿಡ್ ತಡೆ ನಿಯಮದ ಪ್ರಕಾರ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ. ಎಲ್ಲರಿಗೂ ಪ್ರತ್ಯೇಕವಾಸದ ವ್ಯವಸ್ಥೆ ಮಾಡಲಾಗಿರುವ ಪುಲ್‌ಮ್ಯಾನ್ ಹೋಟೆಲ್‌ನಲ್ಲಿರುವ ವಿಶೇಷ ಪೆಂಟ್‌ಹೌಸ್‌ ಅನ್ನು ಕೊಹ್ಲಿಗೆ ನೀಡಲಾಗಿದೆ ಎಂದು ’ಟೆಲಿಗ್ರಾಫ್‌‘ ವರದಿ ಮಾಡಿದೆ.

ಬುಧವಾರ ರಾತ್ರಿ ತಂಡವು ದುಬೈನಿಂದ ಪ್ರಯಾಣ ಆರಂಭಿಸಿತ್ತು. ಐಪಿಎಲ್‌ನಲ್ಲಿ ಆಡಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್‌ ಕೂಡ ಆಸ್ಟ್ರೇಲಿಯಾ ತಲುಪಿದರು.

ಭಾರತ ತಂಡದ ಆಟಗಾರರು ಎರಡು ವಾರಗಳ ಪ್ರತ್ಯೇಕವಾಸದಲ್ಲಿರುವರು. ಈ ಅವಧಿಯಲ್ಲಿ ಅವರಿಗೆ ಬ್ಲ್ಯಾಕ್‌ಟೌನ್ ಅಂತರರಾಷ್ಟ್ರೀಯ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಲು ಸೌಥ್ ವೇಲ್ಸ್‌ ಸರ್ಕಾರವು ವ್ಯವಸ್ಥೆ ಮಾಡಿದೆ. ಜೀವ ಸುರಕ್ಷಾ ನಿಯಮಗಳನ್ನು ಪಾಲಿಸಲಾಗಿದೆ.

ಆಟಗಾರರ ಕುಟುಂಬದ ಸದಸ್ಯರಿಗೂ ಪ್ರತ್ಯೇಕವಾಸದ ವ್ಯವಸ್ಥೆಯನ್ನು ಮಾಡಲಾಗಿದೆ. ನವೆಂಬರ್ 27ರಿಂದ ಸೀಮಿತ ಓವರ್‌ಗಳ ಸರಣಿಯು ಆರಂಭವಾಗಲಿದೆ.

ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬಳಗವು 1992ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಆಟಗಾರರು ಧರಿಸುತ್ತಿದ್ದ ಪೋಷಾಕುಗಳನ್ನು ಧರಿಸುವರು. ಆಗ ಪ್ರಾಯೋಜಕತ್ವ ಕೊಟ್ಟಿದ್ದ ನೈಕಿ ಈಗ ಇಲ್ಲ. ಅದರ ಬದಲಿಗೆ ಎಂಪಿಎಲ್ ಕಿಟ್ ಪ್ರಾಯೋಜಕತ್ವ ವಹಿಸುತ್ತಿದೆ.

ವಿಶೇಷ ಪಿಪಿಇ ಕಿಟ್: ಆಟಗಾರರು ಖಾಸಗಿ ವಿಮಾನದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಧರಿಸಲು ಅವರಿಗೆ ವಿಶೇಷ ಪಿಪಿಇ ಕಿಟ್‌ಗಳನ್ನು ಒದಗಿಸಲಾಗಿತ್ತು.

ಪ್ರತಿಯೊಬ್ಬ ಆಟಗಾರನ ದೇಹದ ಅಳತೆ ಮತ್ತು ಅನುಕೂಲಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಕಿಟ್‌ಗಳನ್ನು ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT