ಮಂಗಳವಾರ, ಜೂನ್ 15, 2021
21 °C
ಇಂಗ್ಲೆಂಡ್‌, ಆಸ್ಟ್ರೇಲಿಯಾ ಎದುರಿನ ಪಂದ್ಯಗಳಲ್ಲಿ ಮೋಸದಾಟ ನಡೆದಿರುವ ಆರೋಪ

ಮೋಸದಾಟ | ಭಾರತದ ಟೆಸ್ಟ್ ‘ಫಿಕ್ಸ್‌’ ಆಗಿರಲಿಲ್ಲ: ಐಸಿಸಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ದುಬೈ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರು ಕ್ರಮವಾಗಿ 2016 ಮತ್ತು 2017ರಲ್ಲಿ ನಡೆದಿದ್ದ ಭಾರತದ ಟೆಸ್ಟ್ ಪಂದ್ಯಗಳು ‘ಫಿಕ್ಸ್‌‘ ಆಗಿರಲಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಸ್ಪಷ್ಟಪಡಿಸಿದೆ. ಆ ಪಂದ್ಯಗಳಲ್ಲಿ ಮೋಸದಾಟ ನಡೆದಿದ್ದು ಪಂದ್ಯದ ಗತಿ ನೋಡಿದರೆ ಫಲಿತಾಂಶ ಏನಾಗುತ್ತದೆ ಎಂದು ಮೊದಲೇ ಹೇಳಬಹುದಾಗಿತ್ತು ಎಂದು ಅಲ್ ಜಝೀರಾ ಸುದ್ದಿ ವಾಹಿನಿಯಲ್ಲಿ ವರದಿ ಪ್ರಕಟವಾಗಿತ್ತು.

2016ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯ ಮತ್ತು 2017ರಲ್ಲಿ ರಾಂಚಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯಗಳನ್ನು 2018ರಲ್ಲಿ ಬಿಡುಗಡೆಗೊಂಡ ‘ಕ್ರಿಕೆಟ್ ಮ್ಯಾಚ್ ಫಿಕ್ಸರ್ಸ್‌’ ಎಂಬ ಸಾಕ್ಷ್ಯಚಿತ್ರದಲ್ಲಿ ಅಲ್ ಜಝೀರಾ ಪ್ರಸ್ತಾಪಿಸಿತ್ತು.

ಸಾಕ್ಷ್ಯಚಿತ್ರದಲ್ಲಿ ಐದು ವ್ಯಕ್ತಿಗಳನ್ನು ತೋರಿಸಲಾಗಿದ್ದು ಅವರ ವರ್ತನೆ ಸಂದೇಹಾಸ್ಪದವಾಗಿತ್ತು ಎಂದು ಹೇಳಲಾಗಿದೆ. ಬುಕ್ಕಿ ಎಂದು ಹೇಳಲಾಗುವ ಅನಿಲ್ ಮುನಾವರ್ ಎಂಬ ವ್ಯಕ್ತಿ ಮೋಸದಾಟದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇದನ್ನು ಐಸಿಸಿ ನಿರಾಕರಿಸಿದೆ. ಐವರ ವರ್ತನೆ ಸಂದೇಹಾಸ್ಪದವಾಗಿರಬಹುದು. ಆದರೆ ಅವರು ಪಂದ್ಯ ಫಿಕ್ಸ್ ಮಾಡಿದ್ದರು ಎಂಬುದನ್ನು ಸಾಬೀತು ಮಾಡಲು ಸಾಕ್ಷ್ಯಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ತನಿಖೆಗೂ ಆದೇಶ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು