ಶುಕ್ರವಾರ, ನವೆಂಬರ್ 22, 2019
27 °C

ಭಾರತ–ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌: ಅಜಿಂಕ್ಯ ರಹಾನೆ ಶತಕ

Published:
Updated:
Prajavani

ರಾಂಚಿ: ಮುಂಬೈಕರ್ ಅಜಿಂಕ್ಯ ರಹಾನೆ ಭಾನುವಾರದ ಪಂದ್ಯದಲ್ಲಿ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ಶತಕ ಗಳಿಸಿದರು. ಅವರಿಗೆ ಇನ್ನೊಬ್ಬ ‘ಮುಂಬೈಕರ್’ ರೋಹಿತ್ ಶರ್ಮಾ ಕೂಡ ಜೊತೆ ನೀಡಿದರು.

ಜೊತೆಯಾಟದ ಭರಾಟೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಶತಕ ಗಳಿಸಿ ಸಂಭ್ರಮಿಸಿದರು.

ಅಜಿಂಕ್ಯ ಶತಕ ಗಳಿಸಿದಾಗ ಭಾರತ ತಂಡವು 3 ವಿಕೆಟ್‌ಗಳಿಗೆ 268 ರನ್‌ ಗಳಿಸಿತು. ರೋಹಿತ್‌ ಶರ್ಮಾ 144 ರನ್‌ ಗಳಿಸಿ ಆಟ ಮುಂದುವರಿಸಿದ್ದರು.

ರೋಹಿತ್ ಶರ್ಮಾ ಶನಿವಾರ ಇಡೀ ದಿನ ಅಂಗಳದಲ್ಲಿ ರಾರಾಜಿಸಿದ್ದರು. ಆಗ ಅವರಿಗೆ ಅಜಿಂಕ್ಯ ರಹಾನೆ ಕೂಡ ಜತೆಯಾಟದ ಮೂಲಕ ಸಾತ್‌ ನೀಡಿದ್ದರು.

* ಇದನ್ನೂ ಓದಿ: ರಾಂಚಿಯಲ್ಲಿ ರಾರಾಜಿಸಿದ ರೋಹಿತ್–ರಹಾನೆ

ಇನ್ನೊಂದು ಕಡೆ ನಿರ್ಭಿತಿಯಿಂದ ಅಡಿದ್ದ ಅಜಿಂಕ್ಯ ರಹಾನೆ ಕೂಡ ಬೌಲರ್‌ಗಳಿಗೆ ಚಳ್ಳೇಹಣ್ಣು ತಿನ್ನಿಸಿದರು. 70ಎಸೆತಗಳಲ್ಲಿಯೇ ಅರ್ಧಶತಕ ಹೊಡೆದಿದ್ದರು. ಆಕರ್ಷಕ ಡ್ರೈವ್, ಪೆಡಲ್‌ ಸ್ವೀಪ್‌ಗಳಿಂದ ನೋಡುಗರ ಮನರಂಜಿಸಿದ್ದರು.

ಪ್ರತಿಕ್ರಿಯಿಸಿ (+)