ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಶತಕಕ್ಕೆ ನಿಮ್ಮ ಇನಿಂಗ್ಸ್‌ ಸ್ಫೂರ್ತಿ: ರೋಹಿತ್‌ಗೆ ರಾಹುಲ್ ಪ್ರತಿಕ್ರಿಯೆ

Last Updated 25 ಸೆಪ್ಟೆಂಬರ್ 2020, 11:26 IST
ಅಕ್ಷರ ಗಾತ್ರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ್ದ ಕನ್ನಡಿಗ ಕೆಎಲ್‌ ರಾಹುಲ್ ಅವರ ಬ್ಯಾಟಿಂಗ್‌ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾ ಶ್ಲಾಘಿಸಿದ್ದರು.

ಪಂದ್ಯದಲ್ಲಿ ಕೇವಲ 69 ಎಸೆತಗಳನ್ನು ಎದುರಿಸಿದ್ದ ರಾಹುಲ್‌, 14 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್‌ಗಳ ಸಹಿತ ಬರೋಬ್ಬರಿ 136 ರನ್‌ ಗಳಿಸಿದ್ದರು.ಇದು ಐಪಿಎಲ್‌ನಲ್ಲಿ ಅವರು ಗಳಿಸಿದ ಎರಡನೇ ಶತಕ. ಮಾತ್ರವಲ್ಲದೆ ಭಾರತೀಯ ಆಟಗಾರನೋರ್ವ ಮತ್ತು ಯಾವುದೇ ತಂಡದ ನಾಯಕ ಗಳಿಸಿದ ಗರಿಷ್ಠ ಮೊತ್ತವಿದು.

ರಾಹುಲ್‌ ಶತಕದ ನೆರವಿನಿಂದ ಪಂಜಾಬ್‌ 206 ರನ್‌ ಗಳಿಸಿತ್ತು. ಇದಕುತ್ತರವಾಗಿ ಆರ್‌ಸಿಬಿಕೇವಲ 109 ರನ್‌ ಗಳಿಸಿ ಆಲೌಟ್‌ ಆಗಿತ್ತು.

ಹೀಗಾಗಿ ರಾಹುಲ್‌ ಅವರನ್ನು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದ ರೋಹಿತ್‌, ‘ರಾಹುಲ್‌ ಅವರಿಂದ ಸಾಕಷ್ಟು ದೃಢವಾದ ಹೊಡೆತಗಳು.ಶ್ರೇಷ್ಠ ಶತಕ’ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್, ‘ಧನ್ಯವಾದಗಳು ರೋಹಿತ್‌. ನಿಮ್ಮ ಕೊನೆಯ ಇನಿಂಗ್ಸ್‌ನಿಂದ ಸ್ಫೂರ್ತಿ ಪಡೆದೆ’ ಎಂದು ತಿಳಿಸಿದ್ದಾರೆ.

ಬುಧವಾರ ನಡೆದಿದ್ದ ಕೊಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ 54 ಎಸೆತಗಳಲ್ಲಿ 80 ರನ್‌ ಗಳಿಸಿದ್ದರು. ಜೊತೆಗೆ ಐಪಿಎಲ್‌ನಲ್ಲಿ 200 ಸಿಕ್ಸರ್ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎನಿಸಿದ್ದರು. ಕ್ರಿಸ್‌ ಗೇಲ್‌ (326), ಎಬಿ ಡಿ ವಿಲಿಯರ್ಸ್‌ (215) ಮತ್ತು ಧೋನಿ (212) ಅವರೂ ಐಪಿಎಲ್‌ನಲ್ಲಿ 200ಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT