ಮುಂಬೈ: ನಿಧಾನಗತಿಯ ಓವರ್ ರೇಟ್‌ಗೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ಮೇಲೆ ₹12 ಲಕ್ಷ ದಂಡ ವಿಧಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಚೆನ್ನೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡವು ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರ್ಣಗೊಳಿಸುವಲ್ಲಿ ವಿಫಲಗೊಂಡಿತ್ತು.

ಪ್ರಸಕ್ತ ಸಾಲಿನಲ್ಲಿ ಮುಂಬೈ ತಂಡದಿಂದ ಮೊದಲ ಬಾರಿಗೆ ಐಪಿಎಲ್ ನಿಯಮಾವಳಿ ಉಲ್ಲಂಘನೆಯಾಗಿದೆ. ಎರಡನೇ ಬಾರಿಗೆ ಇದೇ ತಪ್ಪು ಪುನರಾವರ್ತನೆಯಾದ್ದಲ್ಲಿ 24 ಲಕ್ಷ ರೂ.ಗಳ ದಂಡವನ್ನುಹೇರಲಾಗುವುದು ಎಂದು ಟೂರ್ನಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗೆಯೇ ಮುಂಬೈ ಇಂಡಿಯನ್ಸ್ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಪಂದ್ಯ ಶುಲ್ಕದ ಶೇಕಡಾ 25ರಷ್ಟು ಅಥವಾ ಆರು ಲಕ್ಷ ರೂ.ಗಳ (ಕಡಿಮೆ ಅನ್ವಯ) ದಂಡ ವಿಧಿಸಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಮುಂಬೈ ಇಂಡಿಯನ್ಸ್ ಕ್ಷೇತ್ರರಕ್ಷಣೆ ವೇಳೆ ರೋಹಿತ್ ಶರ್ಮಾ ಮೈದಾನ ತೊರೆದಿದ್ದರು. ಬಳಿಕ ಕೀರಾನ್ ಪೊಲಾರ್ಡ್ ತಂಡದ ನಾಯಕತ್ವವನ್ನು ವಹಿಸಿದ್ದರು.

ಅಂದ ಹಾಗೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.