ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಪಡಿಕ್ಕಲ್ ಪರ ನಾಟೌಟ್ ತೀರ್ಪು; ಅಂಪೈರ್ ವಿರುದ್ಧ ರಾಹುಲ್ ಗರಂ

Last Updated 3 ಅಕ್ಟೋಬರ್ 2021, 12:08 IST
ಅಕ್ಷರ ಗಾತ್ರ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್, ಅಂಪೈರ್ ವಿರುದ್ಧ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ಪಂದ್ಯದ ಎಂಟನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಸ್ಪಿನ್ನರ್ ರವಿ ಬಿಷ್ಣೋಯಿ ಅವರ ಎಸೆತದಲ್ಲಿ ದೇವದತ್ತ ಪಡಿಕ್ಕಲ್ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಚೆಂಡು ವಿಕೆಟ್ ಕೀಪರ್ ರಾಹುಲ್ ಕೈಯೊಳಗೆ ಭದ್ರವಾಗಿ ಸೇರಿತ್ತು.

ಪಂಜಾಬ್ ಮನವಿಯನ್ನು ಅಂಪೈರ್ ಪುರಸ್ಕರಿಸಲಿಲ್ಲ. ಪರಿಣಾಮ ಡಿಆರ್‌ಎಸ್ ಮೊರೆ ಹೋಗಲು ರಾಹುಲ್ ನಿರ್ಧರಿಸಿದರು. ಆದರೆ ಮೂರನೇ ಅಂಪೈರ್ ನಾಟೌಟ್ ತೀರ್ಪು ನೀಡಿರುವುದು ರಾಹುಲ್ ಕೋಪಕ್ಕೆ ಕಾರಣವಾಗಿದೆ.

ರಿಪ್ಲೇ ಪರಿಶೀಲಿಸಿದಾಗ ಚೆಂಡು ಪಡಿಕ್ಕಲ್ ಗ್ಲೋವ್ ಸವರಿದಂತೆ ಭಾಸವಾಗುತ್ತಿತ್ತು. ಅಷ್ಟಾದರೂ ಥರ್ಡ್ ಅಂಪೈರ್ ನಾಟೌಟ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಫೀಲ್ಡ್ ಅಂಪೈರ್‌ನಿಂದ ರಾಹುಲ್ ಸ್ಪಷ್ಪನೆಯನ್ನು ಬಯಸಿದರು.

ಇನ್ನೊಂದೆಡೆ ನಾನ್ ಸ್ಟ್ರೈಕರ್‌ನಲ್ಲಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಇವೆಲ್ಲವನ್ನು ವೀಕ್ಷಿಸುತ್ತಿದ್ದರು. ಆದರೆ ಪ್ರತಿಕ್ರಿಯಿಸಲು ಮುಂದಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT