ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಲಗೈ ವೇಗದ ಬೌಲರ್ ಹರ್ಷಲ್ ಪಟೇಲ್, ಈಗ ಒಂದೇ ಓವರ್ನಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದಾರೆ.

ಐಪಿಎಲ್ನಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹರ್ಷಲ್ ಮಗದೊಮ್ಮೆ ಮಿಂಚಿನ ದಾಳಿ ಸಂಘಟಿಸಿದರು.

ಅಲ್ಲದೆ ಇನ್ನಿಂಗ್ಸ್ನ ಅಂತಿಮ ಓವರ್ನಲ್ಲಿ ಸತತ ಎರಡು ವಿಕೆಟ್ ಕಬಳಿಸಿ ಸ್ವಲ್ಪದರಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶದಿಂದ ವಂಚಿತರಾದರು.

ಆದರೂ ಕೊನೆಯ ಎಸೆತದಲ್ಲಿ ಮಗದೊಂದು ವಿಕೆಟ್ ಪಡೆದು ಮೂರು ವಿಕೆಟ್ ಸಾಧನೆ ಮಾಡಿದರು. ಹರ್ಷಲ್ ದಾಳಿಯಲ್ಲಿ ಔಟ್ ಆದ ರಿಯಾನ್ ಪರಾಗ್ (9), ಕ್ರಿಸ್ ಮೊರಿಸ್ (14) ಹಾಗೂ ಚೇತನ್ ಸಕಾರಿಯಾ (2) ಪೆವಿಲಿಯನ್ಗೆ ಮರಳಿದರು.

ಹರ್ಷಲ್ಪಟೇಲ್, ಐಪಿಎಲ್ 2021ರಲ್ಲಿ ವಿಕೆಟ್ ಗಳಿಕೆಯನ್ನು 26ಕ್ಕೆ ಏರಿಸಿದರು. ಈ ಮೂಲಕ 'ಪರ್ಪಲ್ ಕ್ಯಾಪ್' ತಮ್ಮ ಬಳಿಯಲ್ಲಿಯೇ ಭದ್ರವಾಗಿರಿಸಿದ್ದಾರೆ.

ಕೊನೆಯ 49 ರನ್ ಅಂತರದಲ್ಲಿ 8 ವಿಕೆಟ್ ಪತನ...
ಒಂದು ಹಂತದಲ್ಲಿ 11 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ರಾಜಸ್ಥಾನ್, 149 ರನ್ ಗಳಿಸುವಷ್ಟರಲ್ಲಿ ಒಂಬತ್ತು ವಿಕೆಟ್ಗಳನ್ನು ಕಳೆದುಕೊಂಡಿತು.

ಈ ಮೂಲಕ ಕೊನೆಯ ಒಂಬತ್ತು ಓವರ್ಗಳ ಅಂತರದಲ್ಲಿ 49 ರನ್ನಿಗೆ ಎಂಟು ವಿಕೆಟ್ಗಳನ್ನು ಕಳೆದುಕೊಂಡಿತು. ಆರ್ಸಿಬಿ ಪರ ಮೋಡಿ ಮಾಡಿದ ಯಜುವೇಂದ್ರ ಚಾಹಲ್ ಹಾಗೂ ಶಹಬಾಜ್ ಅಹ್ಮದ್ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು. ಪದಾರ್ಪಣಾ ವೇಗಿ ಜಾರ್ಜ್ ಕಾರ್ಟನ್ ಸಹ ಒಂದು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.