ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | RCB vs CSK: ವಿರಾಟ್-ಪಡಿಕ್ಕಲ್ ಹೋರಾಟ ವ್ಯರ್ಥ; ಆರ್‌ಸಿಬಿ ವಿರುದ್ಧ ಚೆನ್ನೈ ಜಯಭೇರಿ
LIVE

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಗದೊಂದು ಸೋಲಿನ ಆಘಾತಕ್ಕೊಳಗಾಗಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ. ಇದರೊಂದಿಗೆ ನಾಯಕ ವಿರಾಟ್ ಕೊಹ್ಲಿ (53) ಹಾಗೂ ದೇವದತ್ತ ಪಡಿಕ್ಕಲ್ (70) ಪಡಿಕ್ಕಲ್ ಹೋರಾಟವು ವ್ಯರ್ಥವೆನಿಸಿದೆ.
Last Updated 24 ಸೆಪ್ಟೆಂಬರ್ 2021, 18:04 IST
ಅಕ್ಷರ ಗಾತ್ರ
18:0324 Sep 2021
18:0324 Sep 2021

ಅಗ್ರಸ್ಥಾನಕ್ಕೇರಿದ ಚೆನ್ನೈ

18:0224 Sep 2021

ಗೆಲುವಿನ ಓಟ ಮುಂದುವರಿಸಿದ ಚೆನ್ನೈ

17:4124 Sep 2021

ಆರ್‌ಸಿಬಿಗೆ ಸೋಲಿನ ಆಘಾತ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. 

ಇದರೊಂದಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (53) ಹಾಗೂ ದೇವದತ್ತ ಪಡಿಕ್ಕಲ್ (70) ಪಡಿಕ್ಕಲ್ ಹೋರಾಟವು ವ್ಯರ್ಥವೆನಿಸಿದೆ. 

ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ ತಂಡವು ಆರು ವಿಕೆಟ್ ನಷ್ಟ್ಕಕೆ 156 ರನ್‌ಗಳ ಸ್ಪರ್ಧಾತ್ಮಕ ಗುರಿ ಪೇರಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ ಇನ್ನು 11 ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. 

17:3524 Sep 2021

ಫೀಲ್ಡಿಂಗ್‌ನಲ್ಲೂ ಮಿಂಚಿದ ಕೊಹ್ಲಿ

17:3424 Sep 2021

ಹರ್ಷಲ್ ಪಟೇಲ್ ನಿಖರ ದಾಳಿ

17:2024 Sep 2021

15 ಓವರ್‌ಗಳ ಅಂತ್ಯಕ್ಕೆ ಚೆನ್ನೈ 125/3

ಮೊಯಿನ್ ಅಲಿ 23 ರನ್ ಗಳಿಸಿ ಔಟಾದರು. ಅಂತಿಮ 5 ಓವರ್‌ಗಳಲ್ಲಿ ಚೆನ್ನೈ ಗೆಲುವಿಗೆ 32 ರನ್‌ಗಳ ಅಗತ್ಯವಿತ್ತು. 

16:5424 Sep 2021

ವಿರಾಟ್ ಅದ್ಭುತ ಕ್ಯಾಚ್, ಚೆನ್ನೈ ಮೊದಲ ವಿಕೆಟ್ ಪತನ

ಯಜುವೇಂದ್ರ ಚಾಹಲ್ ದಾಳಿಯಲ್ಲಿ ವಿರಾಟ್ ಕೊಹ್ಲಿ ಅಧ್ಭುತ ಕ್ಯಾಚ್ ಹಿಡಿದರು. ಪರಿಣಾಮ ಋತುರಾಜ್ ಗಾಯಕವಾಡ್ (38) ಪೆವಿಲಿಯನ್‌ಗೆ ಮರಳಬೇಕಾಯಿತು. ಆದರೂ ಮೊದಲ ವಿಕೆಟ್‌ಗೆ ಫಾಫ್ ಡು ಪ್ಲೆಸಿ ಜೊತೆಗೆ 8.2 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿದರು. 

ಗಾಯಕವಾಡ್ ಬೆನ್ನಲ್ಲೇ ಫಾಫ್ ಡು ಪ್ಲೆಸಿ (31) ವಿಕೆಟ್ ಪತನವಾಯಿತು. ಈ ವೇಳೆ ಚೆನ್ನೈ 71 ರನ್ ಗಳಿಸಿತ್ತು. 

16:3624 Sep 2021

ಚೆನ್ನೈ ಬಿರುಸಿನ ಆರಂಭ

157 ರನ್ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಬಿರುಸಿನ ಆರಂಭವೊದಗಿಸಿದರು. ಪರಿಣಾಮ ಪವರ್ ಪ್ಲೇಯಲ್ಲಿ ವಿಕೆಟ್ ನಷ್ಟವಿಲ್ಲದೆ 59 ರನ್‌ ಗಳಿಸಿತ್ತು.