ನವಿ ಮುಂಬೈ: 'ರನ್ ಮೆಶಿನ್' ಖ್ಯಾತಿಯ ವಿರಾಟ್ ಕೊಹ್ಲಿ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದ್ದು, ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಳೆದ 100 ಪಂದ್ಯಗಳಲ್ಲಿ ಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಕೊಹ್ಲಿ ಆಡಿರುವ ಕಳೆದ 17 ಟೆಸ್ಟ್, 21 ಏಕದಿನ, 25 ಟ್ವೆಂಟಿ-20 ಹಾಗೂ 37 ಐಪಿಎಲ್ ಪಂದ್ಯಗಳಲ್ಲಿ ಶತಕವನ್ನು ಗಳಿಸಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.

ಇದನ್ನೂ ಓದಿ:IPL 2022: ನಿಯಮ ಉಲ್ಲಂಘನೆ; ರಾಹುಲ್, ಸ್ಟೋಯಿನಿಸ್ಗೆ ದಂಡ

ಕ್ರಿಕೆಟ್ ಅಂಕಿಅಂಶ ತಜ್ಞ ಮಜರ್ ಅರ್ಷದ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮೂರು ಪ್ರಕಾರ ಹಾಗೂ ಐಪಿಎಲ್ ಸೇರಿಸಿ ಅಂಕಿಅಂಶ ಬಿಡುಗಡೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆದ ಕೊಹ್ಲಿ ನಿರಾಸೆ ಮೂಡಿಸಿದ್ದರು.

ಐಪಿಎಲ್ 2022ರಲ್ಲಿ ಇದುವರೆಗಿನ ಏಳು ಪಂದ್ಯಗಳಲ್ಲಿ 19.83ರ ಸರಾಸರಿಯಲ್ಲಿ 119 ರನ್ ಮಾತ್ರ ಗಳಿಸಿದ್ದಾರೆ. ಗರಿಷ್ಠ ಮೊತ್ತ 48 ಆಗಿದೆ.

ಕ್ರಿಕೆಟ್‌ನ ಎಲ್ಲ ಮೂರು ಪ್ರಕಾರದಲ್ಲೂ ಟೀಮ್ ಇಂಡಿಯಾ ನಾಯಕ ಸ್ಥಾನವನ್ನು ಕೊಹ್ಲಿ ತ್ಯಜಿಸಿದ್ದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತೊರೆದಿದ್ದರು. ಈಗ ಬ್ಯಾಟಿಂಗ್ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.