ಪಂಜಾಬ್ ಕಿಂಗ್ಸ್ ತಂಡದ ಅರ್ಷದೀಪ್ ಸಿಂಗ್ ಮತ್ತು ವೈಶಾಖ ವಿಜಯಕುಮಾರ್ ಅಭ್ಯಾಸ –ಪಿಟಿಐ ಚಿತ್ರ
ಮನೋಜ್ ಪದಾರ್ಪಣೆ
ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮನೋಜ್ ಬಾಂಢಗೆ ಪದಾರ್ಪಣೆ ಮಾಡಿದರು. ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿರುವ ಮನೋಜ್ ಅವರು ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿ ಕಣಕ್ಕಿಳಿದರು. ಆರ್‌ಸಿಬಿ ಇನಿಂಗ್ಸ್‌ನಲ್ಲಿ ಅವರು ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗೆ ಇಂಪ್ಯಾಕ್ಟ್ ಸಬ್ ಆಗಿ ಅವಕಾಶ ಪಡೆದರು. ಅವರು 4 ಎಸೆತಗಳಲ್ಲಿ 1 ರನ್ ಗಳಿಸಿದರು. ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.