ಆರ್‌ಸಿಬಿ ಟಿಕೆಟ್ ಮಾರಾಟ ಆರಂಭ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 2ರಂದು ನಡೆಯಲಿರುವ ಐಪಿಎಲ್ ಪಂದ್ಯದ ಟಿಕೆಟ್ ಮಾರಾಟವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಬುಧವಾರ ಆರಂಭಿಸಿದೆ. ಬೆಳಿಗ್ಗೆ 11 ಗಂಟೆಗೆ ಆರ್‌ಸಿಬಿಯ ವೆಬ್‌ಸೈಟ್‌ನಲ್ಲಿ ಮಾರಾಟ ಆರಂಭಿಸಲಾಯಿತು. ₹ 2300 ರಿಂದ ₹42000 ವರೆಗಿನ ವಿವಿಧ ಮೌಲ್ಯದ ಟಿಕೆಟ್‌ಗಳ ಮಾರಾಟ ಆರಂಭವಾಯಿತು.