ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | MI vs KKR: ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ ಜಯ
LIVE

ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ಆಡಿರುವ 8 ಪಂದ್ಯಗಳಿಂದ ಆರು ಗೆಲುವು ಸಾಧಿಸಿದ್ದು, 12 ಪಾಯಿಂಟ್ಸ್‌ಗಳನ್ನು ಗಳಿಸಿಕೊಂಡಿದೆ. ಇತ್ತ ಕೋಲ್ಕತ್ತ ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡು ನಾಲ್ಕನೇ ಸ್ಥಾನದಲ್ಲೇ ಉಳಿಯಿತು.
Last Updated 16 ಅಕ್ಟೋಬರ್ 2020, 17:35 IST
ಅಕ್ಷರ ಗಾತ್ರ
17:1616 Oct 2020

ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ ಜಯ

ಕೆಕೆಆರ್ ನೀಡಿದ ಸಾಧಾರಣ ಗುರಿಯನ್ನು ಮುಂಬೈ ಇಂಡಿಯನ್ಸ್‌ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.

ಕೆಕೆಆರ್‌ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಕ್ವಿಂಟನ್‌ ಡಿ ಕಾಕ್ ಮತ್ತು ನಾಯಕ ರೋಹಿತ್‌ ಶರ್ಮಾ ಅವರ ಆಟದ ನೆರವಿನಿಂದ ಮುಂಬೈ ತಂಡ 16.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತು.

ಬಿರುಸಾಗಿ ಬ್ಯಾಟ್‌ ಬೀಸಿದ ಕ್ವಿಂಟನ್‌ ಕೇವಲ 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 78 ರನ್ ಬಾರಿಸಿದರು.

ಇದು ಮುಂಬೈಗೆ ಟೂರ್ನಿಯಲ್ಲಿ 6ನೇ ಗೆಲುವು. 8 ಪಂದ್ಯಗಳನ್ನು ಆಡಿರುವ ಈ ತಂಡ 2 ಸೋಲು ಕಂಡಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೆಕೆಆರ್‌ ನಾಲ್ಕನೇ ಸ್ಥಾನದಲ್ಲಿದೆ.

17:1316 Oct 2020

16ನೇ ಓವರ್ ಮುಕ್ತಾಯ

16 ಓವರ್‌ಗಳ ಅಂತ್ಯಕ್ಕೆ ಮುಂಬೈ ತಂಡದ ಮೊತ್ತ 2 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದೆ.

ಬೌಲರ್‌: ಪ್ಯಾಟ್‌ ಕಮಿನ್ಸ್ (1 4 0 4 6 0)

17:1016 Oct 2020

15ನೇ ಓವರ್ ಮುಕ್ತಾಯ

ಮುಂಬೈ 2 ವಿಕೆಟ್‌ಗೆ 126 ರನ್ ಗಳಿಸಿದೆ.

ಕ್ವಿಂಟನ್‌ (75), ಹಾರ್ದಿಕ್‌ (1) ಕ್ರೀಸ್‌ನಲ್ಲದ್ದಾರೆ.

ಬೌಲರ್‌: ಶಿವಂ ಮಾವಿ (2 0 4 6 1 0)

16:5816 Oct 2020

14ನೇ ಓವರ್ ಮುಕ್ತಾಯ

ಮುಂಬೈ ತಂಡ 2 ವಿಕೆಟ್‌ಗೆ 113 ರನ್ ಗಳಿಸಿದ್ದು, ಕ್ವಿಂಟನ್ ಹಾಗೂ ಹಾರ್ದಿಕ್‌ ಪಾಂಡ್ಯ‌ ಕ್ರೀಸ್‌ನಲ್ಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಸೂರ್ಯಕುಮಾರ್ ಯಾದವ್‌ 10 ರನ್ ಗಳಿಸಿ ಔಟಾಗಿದ್ದಾರೆ.

ಉಳಿದಿರುವ 6 ಓವರ್‌ಗಳಲ್ಲಿ ಗೆಲ್ಲಲು ಕೇವಲ 36 ರನ್‌ ಗಳಿಸಬೇಕಾಗಿದೆ.

ಬೌಲರ್‌: ವರುಣ್‌ ಚಕ್ರವರ್ತಿ (0 1 W 0 1 1)

16:5416 Oct 2020

13ನೇ ಓವರ್ ಮುಕ್ತಾಯ

13 ಓವರ್‌ ಅಂತ್ಯಕ್ಕೆ ಮುಂಬೈ ತಂಡದ ಮೊತ್ತ 1 ವಿಕೆಟ್‌ಗೆ 110 ಆಗಿದೆ.

ಕ್ವಿಂಟನ್‌ (60) ಮತ್ತು ಸೂರ್ಯಕುಮಾರ್‌ (10) ಕ್ರೀಸ್‌ನಲ್ಲಿದ್ದಾರೆ.

ಬೌಲರ್: ಶಿವಂ ಮಾವಿ (1 0 1 0 1 4)

16:5016 Oct 2020

12ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಮುಂಬೈ

12 ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಶತಕದ ಗಡಿ ದಾಟಿದೆ.

ಬೌಲರ್‌: ವರುಣ್‌ ಚಕ್ರವರ್ತಿ (1 1 2 1 2 2)

16:4516 Oct 2020

11ನೇ ಓವರ್ ಮುಕ್ತಾಯ: ರೋಹಿತ್‌ ಔಟ್

11ನೇ ಓವರ್‌ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್‌ ತಂಡ 1 ವಿಕೆಟ್‌ ಕಳೆದುಕೊಂಡು 94 ರನ್ ಗಳಿಸಿದೆ.

35 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ. ಸದ್ಯ ಸೂರ್ಯಕುಮಾರ್‌ ಯಾದವ್‌ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್: ಶಿವಂ ಮಾವಿ (0 4 W 0 0 0)

16:4116 Oct 2020

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದೆ. ಲೀಲಾಜಾಲವಾಗಿ ಬ್ಯಾಟಿಂಗ್ ಮಾಡುತ್ತಿರುವ ಮುಂಬೈ ಇಂಡಿಯನ್ಸ್‌ನ ಆರಂಭಿಕರು ಮೊದಲ ವಿಕೆಟ್‌ ಜೊತೆಯಾಟದಲ್ಲಿ ಅಜೇಯ 90 ರನ್ ಕಲೆಹಾಕಿದ್ದಾರೆ.

ಬೌಲರ್‌: ವರುಣ್‌ ಚಕ್ರವರ್ತಿ (0 0 6 0 1 0)

16:3716 Oct 2020

9ನೇ ಓವರ್ ಮುಕ್ತಾಯ

9 ಓವರ್‌ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್‌ 83 ರನ್ ಗಳಿಸಿದೆ. ಕ್ವಿಂಟನ್‌ ಕೇವಲ 26 ಎಸೆತಗಳಲ್ಲಿ 54 ರನ್‌ ಗಳಿಸಿದ್ದಾರೆ. ಇದು ಈ ಐಪಿಎಲ್‌ನಲ್ಲಿ ಅವರ 3ನೇ ಅರ್ಧಶತಕ.

ಇನ್ನೊಂದು ತುದಿಯಲ್ಲಿ ರೋಹಿತ್‌ (24) ತಾಳ್ಮೆಯ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಬೌಲರ್‌: ಆ್ಯಂಡ್ರೆ ರಸೆಲ್‌ (0 0 4 6 1 1)

16:3016 Oct 2020

8ನೇ ಓವರ್ ಮುಕ್ತಾಯ

8 ಓವರ್ ಮುಕ್ತಾಯವಾಗಿದ್ದು, ಮುಂಬೈ ವಿಕೆಟ್‌ ನಷ್ಟವಿಲ್ಲದೆ 71 ರನ್ ಕಲೆಹಾಕಿದೆ.

ಬೌಲರ್‌: ವರಣ್‌ ಚಕ್ರವರ್ತಿ (0 2 1 1 0 0)