ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | RCB vs RR: ಆರ್‌ಸಿಬಿಗೆ ಗೆಲುವು ತಂದುಕೊಟ್ಟ ವಿಲಿಯರ್ಸ್‌
LIVE

ಕಿಂಗ್ಸ್‌ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗಿ ಕೈಸುಟ್ಟುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ರಾಜಸ್ಥಾನ ರಾಯಲ್ಸ್ ಎದುರು ಪಂದ್ಯದಲ್ಲಿ ಗೆಲುವು ಸಾಧಿಸಿದೆ.
Last Updated 17 ಅಕ್ಟೋಬರ್ 2020, 14:02 IST
ಅಕ್ಷರ ಗಾತ್ರ
13:5017 Oct 2020

ಆರ್‌ಸಿಬಿಗೆ 7 ವಿಕೆಟ್ ಗೆಲುವು

20ನೇ ಓವರ್‌ನಲ್ಲಿ ಬೇಕಾಗಿದ್ದ 10 ರನ್‌ಗಳನ್ನು ಕೇವಲ 4 ಎಸೆತಗಳಲ್ಲಿ ಗಳಿಸಿಕೊಟ್ಟ ಎಬಿ ಡಿ ವಿಲಿಯರ್ಸ್‌ ಆರ್‌ಸಿಬಿಗೆ 7 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಕೇವಲ 22 ಎಸೆತಗಳನ್ನು ಎದುರಿಸಿದ ವಿಲಿಯರ್ಸ್‌ 6 ಸಿಕ್ಸರ್‌ ಮತ್ತು 1 ಬೌಂಡರಿ ಸಹಿತ ಅಜೇಯ 55 ರನ್‌ಗಳನ್ನು ಬಾರಿಸಿದರು. ಕೊನೆಯಲ್ಲಿ ವಿಲಿಯರ್ಸ್‌ಗೆ ಉತ್ತಮ ಬೆಂಬಲ ನೀಡಿದ ಗುರುಕೀರತ್‌ ಸಿಂಗ್‌ 19 ರನ್‌ ಗಳಿಸಿ ಔಟಾಗದೆ ಉಳಿದರು.

ಇದರೊಂದಿಗೆ ಆರ್‌ಸಿಬಿ ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.

ಬೌಲರ್‌: ಜೋಫ್ರಾ ಆರ್ಚರ್‌ (2 1 2 6)

13:3617 Oct 2020

19ನೇ ಓವರ್ ಮುಕ್ತಾಯ: ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ವಿಲಿಯರ್ಸ್‌

19ನೇ ಓವರ್‌ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಎಬಿ ಡಿ ವಿಲಿಯರ್ಸ್‌, ಆರ್‌ಸಿಬಿಯನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ.

ಈ ಓವರ್‌ನಲ್ಲಿ ಒಟ್ಟು 25 ರನ್‌ಗಳು ಹರಿದು ಬಂದಿದ್ದು, ಕೊನೆಯ ಓವರ್‌ನಲ್ಲಿ  10 ರನ್‌ ಬೇಕಾಗಿವೆ. ಈ ಓವರ್‌ಗೂ ಮೊದಲು ಆರ್‌ಸಿಬಿಗೆ 12  ಎಸೆತಗಳಲ್ಲಿ 35 ರನ್‌ಗಳು ಬೇಕಾಗಿದ್ದವು.

ಬೌಲರ್‌: ಜಯದೇವ ಉನದ್ಕಟ್‌ ( 6 6 6 1 Wd 4 1)

13:2817 Oct 2020

18ನೇ ಓವರ್ ಮುಕ್ತಾಯ

18ನೇ ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 143 ರನ್ ಗಳಿಸಿಕೊಂಡಿದೆ. ಉಳಿದಿರುವ 2 ಓವರ್‌ಗಳಲ್ಲಿ ಆರ್‌ಸಿಬಿಗೆ 35 ರನ್ ಬೇಕಾಗಿದೆ.

ಬೌಲರ್‌: ಕಾರ್ತಿಕ್‌ ತ್ಯಾಗಿ (1 4 1 0 3 1)

13:2117 Oct 2020

17ನೇ ಓವರ್ ಮುಕ್ತಾಯ

17ನೇ ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 133 ರನ್ ಗಳಿಸಿಕೊಂಡಿದೆ. ಉಳಿದಿರುವ 3 ಓವರ್‌ಗಳಲ್ಲಿ ಆರ್‌ಸಿಬಿಗೆ 45 ರನ್ ಬೇಕಾಗಿದೆ.

ಬೌಲರ್‌: ಜಯದೇವ ಉನದ್ಕಟ್‌ (0 0 0 1 6 2)

13:1517 Oct 2020

16ನೇ ಓವರ್ ಮುಕ್ತಾಯ

16 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 3 ವಿಕೆಟ್‌ ನಷ್ಟಕ್ಕೆ 124 ರನ್‌ ಗಳಿಸಿದೆ. ಈ ಹಂತದಲ್ಲಿ ಆರ್‌ಆರ್‌ 4 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿತ್ತು.

ಆರ್‌ಸಿಬಿ ಉಳಿದಿರುವ 4 ಓವರ್‌ಗಳಲ್ಲಿ 54 ರನ್ ಗಳಿಸಬೇಕಿದೆ.

ಬೌಲರ್‌: ಜೋಫ್ರಾ ಆರ್ಚರ್‌ (1 1 1 1 6 0)

13:1217 Oct 2020

15ನೇ ಓವರ್ ಮುಕ್ತಾಯ

15 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 3 ನಷ್ಟಕ್ಕೆ 64 ರನ್‌ ಗಳಿಸಿದೆ. ವಿಲಿಯರ್ಸ್‌ ಮತ್ತು ಗುರುಕೀರತ್‌ ಕ್ರೀಸ್‌ನಲ್ಲಿದ್ದು, ಉಳಿದಿರುವ 5 ಓವರ್‌ಗಳಲ್ಲಿ 64 ರನ್ ಗಳಿಸಬೇಕಿದೆ.

ಬೌಲರ್‌: ಶ್ರೇಯಸ್‌ ಗೋಪಾಲ್‌ (1 1 1 Wd 1 3 2)

13:0717 Oct 2020

14ನೇ ಓವರ್ ಮುಕ್ತಾಯ: ಕೊಹ್ಲಿ ವಿಕೆಟ್ ಪತನ

14ನೇ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್‌ ಕೊಹ್ಲಿ (43) ವಿಕೆಟ್ ಒಪ್ಪಿಸಿದ್ದಾರೆ. ಓವರ್‌ನ ಅಂತ್ಯಕ್ಕೆ ಆರ್‌ಸಿಬಿ ಮೊತ್ತ 3 ವಿಕೆಟ್‌ಗೆ 104 ರನ್‌ ಗಳಿಸಿದೆ.

ವಿಲಿಯರ್ಸ್‌ ಮತ್ತು ಗುರುಕೀರತ್ ಸಿಂಗ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಾರ್ತಿಕ್‌ ತ್ಯಾಗಿ (1 1 6 Wd 1 0 W)

13:0017 Oct 2020

13ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಆರ್‌ಸಿಬಿ

ಆರ್‌ಸಿಬಿ 13ನೇ ಓವರ್‌ ಅಂತ್ಯಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡು 102 ರನ್‌ ಗಳಿಸಿಕೊಂಡಿದೆ. ಕೊಹ್ಲಿ ಜೊತೆಗೆ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 79 ರನ್‌ ಕೂಡಿಸಿದ್ದ ಪಡಿಕ್ಕಲ್‌ (35) ಈ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್‌: ರಾಹುಲ್‌ ತೆವಾಟಿಯಾ (1 1 6 Wd 1 0 W)

12:5317 Oct 2020

12ನೇ ಓವರ್ ಮುಕ್ತಾಯ

12 ಓವರ್‌ ಮುಗಿದಿದ್ದು, ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 92 ರನ್‌ ಗಳಿಸಿದೆ. ಕೊಹ್ಲಿ ಮತ್ತು ಪಡಿಕ್ಕಲ್‌ ಜೋಡಿ 2ನೇ ವಿಕೆಟ್‌ ಜೊತೆಯಾಟದಲ್ಲಿ 69 ರನ್‌ ಕಲೆಹಾಕಿದೆ.

ಬೌಲರ್‌: ಕಾರ್ತಿಕ್ ತ್ಯಾಗಿ (2 2 1 Wd 1 1 0)

12:4917 Oct 2020

11ನೇ ಓವರ್ ಮುಕ್ತಾಯ

11 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 1 ವಿಕೆಟ್ ನಷ್ಟಕ್ಕೆ 84 ರನ್‌ ಗಳಿಸಿದೆ.

ಬೌಲರ್‌: ರಾಹುಲ್‌ ತೆವಾಟಿಯಾ (2 1 0 1 1 Wd 1)