ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಮಾಧ್ಯಮ ಹಕ್ಕುಗಳ ಮೌಲ್ಯ ₹4 ಲಕ್ಷ ಕೋಟಿ: ಧುಮಾಲ್ ಆಶಯ

Published 1 ಡಿಸೆಂಬರ್ 2023, 15:43 IST
Last Updated 1 ಡಿಸೆಂಬರ್ 2023, 15:43 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಎರಡು ದಶಕಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮಾಧ್ಯಮ ಹಕ್ಕುಗಳ ಮೌಲ್ಯವು ಮುಂದಿನ ಎರಡು ದಶಕಗಳಲ್ಲಿ ₹ 4 ಲಕ್ಷ ಕೋಟಿಗಳಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಅರುಣ್ ಧುಮಾಲ್ ಅಂದಾಜಿಸಿದ್ದಾರೆ.

2022ರಿಂದ ಐದು ವರ್ಷಗಳ ಅವಧಿಯ ಮಾಧ್ಯಮ ಹಕ್ಕುಗಳು ₹ 48 ಸಾವಿರ ಕೋಟಿಗೆ ಮಾರಾಟವಾಗಿದ್ದವು.

‘ಐಪಿಎಲ್ ದಿನದಿಂದ ದಿನಕ್ಕೆ ಹೊಸತನಗಳನ್ನು ಮೈಗೂಡಿಸಿಕೊಂಡು ಪ್ರೇಕ್ಷಕರನ್ನು ಸತತವಾಗಿ ಹಿಡಿದಿಟ್ಟುಕೊಂಡರೆ ಮಾತ್ರ ಮೌಲ್ಯವು ಹೆಚ್ಚಲಿದೆ. ಈಗಾಗಲೇ 15 ವರ್ಷಗಳಿಂದ ಐಪಿಎಲ್ ಜನಮಾನಸದಲ್ಲಿ ಅಚ್ಚೊತ್ತಿದೆ. ಆದ್ದರಿಂದ 2043ರ ವೇಳೆಗೆ ಇದು ಮೌಲ್ಯವು ಗಗನಮುಖಿಯಾಗುವ ಭರವಸೆ ಇದೆ’ ಎಂದು ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನ್ನೋವೆಷನ್ ಲ್ಯಾಬ್‌ ಲೀಡರ್ಸ್ ಕೂಟದಲ್ಲಿ ಹೇಳಿದರು.

‘ಕ್ರಿಕೆಟ್ ಅಭಿಮಾನಿಗಳನ್ನು ಒಳಗೊಳ್ಳುವಿಕೆಯ ಪ್ರಕ್ರಿಯೆಯನ್ನು ನಾವು ನಿರಂತರವಾಗಿ ನಡೆಸಬೇಕು. ಪಂದ್ಯಗಳ ಗುಣಮಟ್ಟ ಸುಧಾರಣೆ ಮಾಡುತ್ತಲೇ ಸಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಇದೀಗ ಕ್ರಿಕೆಟ್ ಒಲಿಂಪಿಕ್ ಕೂಟಕ್ಕೂ ಸೇರ್ಪಡೆಯಾಗುತ್ತಿದೆ. 2028ರ ಲಾಸ್‌ ಏಂಜಲೀಸ್ ಒಲಿಂಪಿಕ್ ಕೂಟದಲ್ಲಿ ಮಹಿಳಾ ಕ್ರಿಕೆಟ್ ನಡೆಯಲಿದೆ. ಇದರಿಂದಾಗಿ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್) ಟೂರ್ನಿಯ ಗುಣಮಟ್ಟ ಉತ್ತಮವಾಗಲಿದೆ’ ಎಂದು ಧುಮಾಲ್ ಹೇಳಿದರು.

‘ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಕರನ್ನೊಳಗೊಂಡ ಕ್ರಿಕೆಟ್ ಲೀಗ್ ಐಪಿಎಲ್ ಆಗಿದೆ. ನನ್ನ ಅಭಿಪ್ರಾಯದಲ್ಲಿ ಐಪಿಎಲ್ ಟೂರ್ನಿಯು ಮೇಕ್ ಇನ್ ಇಂಡಿಯಾಗೆ ಉತ್ತಮ ಮಾದರಿ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT