ಯಾವುದೇ ಸ್ಥಾನದಲ್ಲೂ ಬ್ಯಾಟಿಂಗ್‌ಗೆ ಸಿದ್ಧ: ಪಂತ್‌

ಮಂಗಳವಾರ, ಏಪ್ರಿಲ್ 23, 2019
31 °C

ಯಾವುದೇ ಸ್ಥಾನದಲ್ಲೂ ಬ್ಯಾಟಿಂಗ್‌ಗೆ ಸಿದ್ಧ: ಪಂತ್‌

Published:
Updated:
Prajavani

ಮುಂಬೈ: ಮುಂಬೈ ಇಂಡಿ ಯನ್ಸ್ ಎದುರು ಸ್ಫೋಟಕ ಬ್ಯಾಟಿಂಗ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಜಯಕ್ಕೆ ಕಾರಣರಾದ ರಿಷಭ್ ಪಂತ್‌ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಪಂತ್‌ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕ್ಯಾಪಿಟಲ್ಸ್‌ 213 ರನ್‌ ಗಳಿಸಿತ್ತು. ನಂತರ 176 ರನ್‌ಗಳಿಗೆ ಎದುರಾಳಿಗಳನ್ನು ಔಟ್ ಮಾಡಿ 37 ರನ್‌ಗಳ ಗೆಲುವು ಸಾಧಿಸಿತ್ತು. ಪಂತ್ ಈ ಪಂದ್ಯದಲ್ಲಿ ತಲಾ ಏಳು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ್ದರು.

ಪಂದ್ಯದ ನಂತರ ಮಾತನಾಡಿದ ಅವರು ‘ತಂಡ ಬಯಸಿದರೆ ಯಾವುದೇ ಸ್ಥಾನದಲ್ಲಿ ಆಡುವೆ. ಪ್ರತಿ ದಿನವೂ ಕಲಿ ಯುತ್ತಿರುವ ಆಟಗಾರ. ಈ ಹಾದಿಯಲ್ಲಿ ಅನೇಕ ಏಳು–ಬೀಳುಗಳನ್ನು ಕಂಡಿ ದ್ದೇನೆ. ಈಗ ಅಗ್ರ ಕ್ರಮಾಂಕದಲ್ಲಿ ಆಡುವ ಅವಕಾಶ ಲಭಿಸಿರುವುದು ಖುಷಿ ತಂದಿದೆ. ಐಪಿಎಲ್‌ನ ಮೊದಲ ಪಂದ್ಯ ದಲ್ಲಿ ಗೆದ್ದಿರುವುದು ಈ ಖುಷಿಯನ್ನು ಹೆಚ್ಚಿಸಿದೆ’ ಎಂದರು.

‘ತಂಡದ ರನ್ ರೇಟ್ ಹೆಚ್ಚಿಸುವ ಜವಾಬ್ದಾರಿ ನನ್ನ ಮೇಲಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ ವಾಗಿದೆ. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವಿಶಿಷ್ಟ ರೀತಿಯಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಬೌಲರ್ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿರುವಾಗಲೇ ತಿರು ಗೇಟು ನೀಡಲು ಸಾಧ್ಯವಾದರೆ ರನ್ ಗಳಿಸು ವುದು ಸುಲಭ’ ಎಂದು ಹೇಳಿದರು.

ಪಂತ್ ಆಟದ ಶೈಲಿಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ಸೂಚಿಸಿದ್ದಾರೆ.

ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಯುವರಾಜ್ ಸಿಂಗ್ (53; 35 ಎಸೆತ, 3 ಸಿಕ್ಸರ್, 5 ಬೌಂಡರಿ) ಬಗ್ಗೆಯೂ ರೋಹಿತ್ ಮೆಚ್ಚುಗೆಯ ನುಡಿಗಳನ್ನಾಡಿದರು. ‘ಯುವರಾಜ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅಗ್ರ ಕ್ರಮಾಂಕದ ನಾಲ್ವರ ಪೈಕಿ ಯಾರಾದರೂ ಒಬ್ಬರು 70ರಿಂದ 80 ರನ್‌ ಗಳಿಸಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !