ಸೋಮವಾರ, ಸೆಪ್ಟೆಂಬರ್ 26, 2022
22 °C

ಐಪಿಎಲ್‌: ಪಂಜಾಬ್ ಕಿಂಗ್ಸ್‌ನ ಮುಖ್ಯ ತರಬೇತುದಾರರಾಗಿ ಟ್ರೆವರ್ ಬೇಲಿಸ್ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಆಗಿ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಮುಖ್ಯ ತರಬೇತುದಾರರಾಗಿದ್ದ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸದಿರಲು ನಿರ್ಧರಿಸಿರುವುದಾಗಿ ಇತ್ತೀಚೆಗೆ ಪಂಜಾಬ್ ಕಿಂಗ್ಸ್ ಘೋಷಿಸಿತ್ತು.

‘ಪಂಜಾಬ್ ಕಿಂಗ್ಸ್‌ ತಂಡದ ಮುಖ್ಯ ತರಬೇತುದಾರನ ಹೊಣೆ ನೀಡಿರುವುದು ಗೌರವ ತಂದಿದೆ. ಪ್ರತಿಭಾವಂತ ಆಟಗಾರರಿರುವ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ಎಂದು ಬೇಲಿಸ್ ಹೇಳಿದ್ದಾರೆ.

2019ರಲ್ಲಿ 50 ಓವರ್‌ಗಳ ವಿಶ್ವಕಪ್ ಜಯಿಸಿದ್ದ ಇಂಗ್ಲೆಂಡ್ ತಂಡ, 2012 ಮತ್ತು 2014ರ ಐಪಿಎಲ್ ಆವೃತ್ತಿಗಳಲ್ಲಿ ಟ್ರೋಫಿ ಗೆದ್ದ ಕೋಲ್ಕತ್ತ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿರುವ ಬೇಲಿಸ್, ಪಂಜಾಬ್ ತಂಡಕ್ಕೆ ಈಗ ತಮ್ಮ ಅನುಭವದ ಧಾರೆ ಎರೆಯಲಿದ್ದಾರೆ.

ಸಿಡ್ನಿ ಸಿಕ್ಸರ್ ತಂಡಕ್ಕೂ ತರಬೇತುದಾರರಾಗಿದ್ದ ಬೇಲಿಸ್, ಬಿಗ್ ಬ್ಯಾಷ್ ಲೀಗ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2020 ಮತ್ತು 21ರ ಆವೃತ್ತಿಯ ಐಪಿಎಲ್ ಟೂರ್ನಿಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಜೊತೆಗಿದ್ದರು.

ಅನಿಲ್ ಕುಂಬ್ಳೆ ಮುಖ್ಯ ತರಬೇತುದಾರರಾಗಿದ್ದ ಆಗಿದ್ದ ಕಳೆದ ಮೂರೂ ಐಪಿಎಲ್ ಆವೃತ್ತಿಗಳಲ್ಲಿ ಪಂಜಾಬ್ ತಂಡ ಪ್ಲೇಆಫ್ ತಲುಪುವಲ್ಲಿ ವಿಫಲವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು