ಲಂಡನ್ : ಏಕದಿನ ವಿಶ್ವಕಪ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಬೀಗಿರುವ ಇಂಗ್ಲೆಂಡ್ ತಂಡ ಈಗ ಹೊಸ ಸವಾಲಿಗೆ ಸಿದ್ಧವಾಗಿದೆ.

ಜೋ ರೂಟ್ ಪಡೆ, ಬುಧವಾರದಿಂದ ಐರ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಆಡಲಿದ್ದು, ನಾಲ್ಕು ದಿನಗಳ ಈ ಐತಿಹಾಸಿಕ ಹಣಾಹಣಿಗೆ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ಅಂಗಳದಲ್ಲಿ ವೇದಿಕೆ ಸಜ್ಜಾಗಿದೆ.

ಮುಂದಿನ ತಿಂಗಳು ಆಸ್ಟ್ರೇಲಿಯಾ ಎದುರಿನ ಆ್ಯಷಸ್ ಟೆಸ್ಟ್ ಸರಣಿ ಆರಂಭವಾಗಲಿದೆ. ಹೀಗಾಗಿ ವಿಶ್ವಕಪ್ ಹೀರೊಗಳಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ಜೋಸ್ ಬಟ್ಲರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಜೇಸನ್ ರಾಯ್, ಜೋ ಡೆನ್ಲಿ, ಮೋಯಿನ್ ಅಲಿ, ಸ್ಯಾಮ್ ಕರನ್, ಜಾನಿ ಬೇಸ್ಟೊ, ರಾರಿ ಜೋಸೆಫ್ ಬರ್ನ್ಸ್ ಅವರು ಬ್ಯಾಟಿಂಗ್ನಲ್ಲಿ ಆತಿಥೇಯರ ಬೆನ್ನೆಲುಬಾಗಿದ್ದಾರೆ.

ಕ್ರಿಸ್ ವೋಕ್ಸ್, ಲೆವಿಸ್ ಗ್ರೆಗೊರಿ, ಒಲ್ಲಿ ಸ್ಟೋನ್ ಮತ್ತು ಸ್ಟುವರ್ಟ್ ಬ್ರಾಡ್ ಅವರು ವೇಗದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಹೋದ ವರ್ಷ ಟೆಸ್ಟ್ ಮಾನ್ಯತೆ ಪಡೆದಿದ್ದ ಐರ್ಲೆಂಡ್ ಈ ಮಾದರಿಯಲ್ಲಿ ಆಡುತ್ತಿರುವ ಮೂರನೇ ಪಂದ್ಯ ಇದಾಗಿದೆ.

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ವಿರುದ್ಧ ಆಡಿದ್ದ ಹಿಂದಿನ ಪಂದ್ಯಗಳಲ್ಲಿ ಈ ತಂಡವು ಕ್ರಮವಾಗಿ 5 ಮತ್ತು 7 ವಿಕೆಟ್ಗಳಿಂದ ಸೋತಿತ್ತು.

ವಿಲಿಯಂ ಪೋರ್ಟರ್ಫೀಲ್ಡ್ ಸಾರಥ್ಯದ ಐರ್ಲೆಂಡ್, ಈ ಸಲದ ಏಕದಿನ ವಿಶ್ವಕಪ್ಗೆ ಅರ್ಹತೆ ಗಳಿಸಿರಲಿಲ್ಲ. ವಿಶ್ವ ಚಾಂಪಿಯನ್ನರನ್ನು ಮಣಿಸಿ ಈ ನಿರಾಸೆ ಮರೆಯಲು ತಂಡ ಕಾತರವಾಗಿದೆ.

ಜೇಮ್ಸ್ ಮೆಕ್ಲಮ್, ಸಿಮ್ರನ್ಜೀತ್ ಸಿಂಗ್, ಪೋರ್ಟರ್ಫೀಲ್ಡ್, ಕೆವಿನ್ ಓಬ್ರಿಯನ್, ಪಾಲ್ ಸ್ಟರ್ಲಿಂಗ್, ಮಾರ್ಕ್ ಅಡೇರ್, ಆ್ಯಂಡ್ರ್ಯೂ ಬಾಲ್ಬರ್ನೀ ಮತ್ತು ಗ್ಯಾರಿ ವಿಲ್ಸನ್ ಅವರಂತಹ ಪ್ರತಿಭಾನ್ವಿತರು ಈ ತಡದಲ್ಲಿದ್ದಾರೆ.

ವೇಗದ ಬೌಲರ್ಗಳಾದ ಬಾಯ್ಡ್ ರಾಂಕಿನ್, ಕ್ರೆಗ್ ಯಂಗ್, ಸ್ಟುವರ್ಟ್ ಥಾಂಪ್ಸನ್ ಮತ್ತು ಟಿಮ್ ಮುರ್ತಗಾ ಅವರು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಸವಾಲಾಗಬಲ್ಲರು.

ಆ್ಯಂಡರ್ಸನ್ ಇಲ್ಲ: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

‘ಆ್ಯಂಡರ್ಸನ್ ಅವರು ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಆ್ಯಷಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಿದ್ದೇವೆ’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.