ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿಯಲ್ಲಿ ಆಡದ ಇಶಾನ್

Published 16 ಫೆಬ್ರುವರಿ 2024, 23:42 IST
Last Updated 16 ಫೆಬ್ರುವರಿ 2024, 23:42 IST
ಅಕ್ಷರ ಗಾತ್ರ

ಜೆಮ್ಶೆಡ್‌ಪುರ್: ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಆಡುತ್ತಿಲ್ಲ.

ಶುಕ್ರವಾರ ಆರಂಭವಾದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಇಶಾನ್ ಅವರ ತವರು ಜಾರ್ಖಂಡ್ ತಂಡವು ರಾಜಸ್ಥಾನ ವಿರುದ್ಧ ಆಡುತ್ತಿದೆ.  ರಣಜಿ ಪಂದ್ಯದಲ್ಲಿ ಆಡುವಂತೆ ಈಚೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸೂಚನೆ ನೀಡಿತ್ತು.  

ಆದರೆ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಬರೋಡಾದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.  ಅವರಲ್ಲದೇ ಮಧ್ಯಮವೇಗಿ ದೀಪಕ್ ಚಾಹರ್ ಕೂಡ ರಣಜಿ ಪಂದ್ಯದಿಂದ ದೂರವುಳಿದಿದ್ದಾರೆ.

‘ಭಾರತ ತಂಡಕ್ಕೆ ಮರಳಲು ದೇಶಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಬೇಕು. ರಣಜಿ ಆಡು‘ ಎಂದು ಭಾರತ ತಂಡದ ಅನುಭವಿ ಆಟಗಾರರೊಬ್ಬರು ಇಶಾನ್‌ಗೆ ಹೇಳಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT