ಭಾನುವಾರ, ಸೆಪ್ಟೆಂಬರ್ 19, 2021
25 °C

‘ದಿ ಹಂಡ್ರೆಡ್‌’ ಟೂರ್ನಿಗೆ ಜೆಮಿಮಾ ರಾಡ್ರಿಗಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತದ ಯುವ ಬ್ಯಾಟರ್ ಜೆಮಿಮಾ ರಾಡ್ರಿಗಸ್‌ ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ನೂರು ಎಸೆತಗಳ ಕ್ರಿಕೆಟ್ ಟೂರ್ನಿ ‘ದಿ ಹಂಡ್ರೆಡ್‌’ನಲ್ಲಿ ಪಾಲ್ಗೊಳ್ಳಲಿದ್ದು ನಾರ್ತರ್ನ್ ಸೂಪರ್ ಚಾರ್ಜರ್ಸ್‌ ತಂಡದ ಪರ ಆಡಲಿದ್ದಾರೆ.

ಜುಲೈ 21ರಿಂದ ನಡೆಯಲಿರುವ ಟೂರ್ನಿಯಲ್ಲಿ ಪುರುಷ ಮತ್ತು ಮಹಿಳೆಯರ ಎಂಟು ತಂಡಗಳು ಪಾಲ್ಗೊಳ್ಳಲಿವೆ. ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌, ಉಪನಾಯಕಿ ಸ್ಮೃತಿ ಮಂದಾನ, ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಈಗಾಗಲೇ ವಿವಿಧ ತಂಡಗಳನ್ನು ಸೇರಿಕೊಂಡಿದ್ದಾರೆ. ‌

‌‌‘ದಿ ಹಂಡ್ರೆಡ್ ಟೂರ್ನಿಯಲ್ಲಿ ‍ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ಇದು ವಿಶಿಷ್ಟ ಮತ್ತು ಹೊಸತನದ ಟೂರ್ನಿಯಾಗಿದ್ದು ಕುತೂಹಲ ಮೂಡಿದೆ’ ಎಂದು ಬಿಬಿಸಿಯ ‘ಸ್ಟಂಪ್ಡ್‌’ ಪಾಡ್‌ಕಾಸ್ಟ್ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ 20 ವರ್ಷದ ಜೆಮಿಮಾ ಅಭಿಪ್ರಾಯಪಟ್ಟಿದ್ದಾರೆ.

‘ಯಾರ್ಕ್‌ಶೈರ್ ಡೈಮಂಡ್ಸ್‌ ತಂಡದ ಪರ ಈ ಹಿಂದೆ ಟೂರ್ನಿಯೊಂದರಲ್ಲಿ ಆಡಿದ್ದೇನೆ. ಈಗ ನಾನು ಸೇರಿಕೊಂಡಿರುವ ತಂಡ ನಾರ್ತರ್ನ್ ಸೂಪರ್ ಚಾರ್ಜರ್ಸ್‌. ಲಾರೆನ್ ವಿನ್‌ಫೀಲ್ಡ್‌ ಈ ತಂಡದ ನಾಯಕಿ. ವಿವಿಧ ತಂಡಗಳಲ್ಲಿರುವ ಬಹುತೇಕರನ್ನು ನಾನು ಬಲ್ಲೆ’ ಎಂದು ಅವರು ಹೇಳಿದ್ದಾರೆ.

ಟೆಸ್ಟ್‌, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತ ತಂಡದಲ್ಲಿ ಜೆಮಿಮಾ ಸ್ಥಾನ ಗಳಿಸಿದ್ದಾರೆ. ತಂಡ ಈಗ ಕ್ವಾರಂಟೈನ್‌ನಲ್ಲಿದ್ದು ಜೂನ್ ಎರಡರಂದು ಪ್ರಯಾಣ ಬೆಳೆಸಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು