ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್: ಶತಕದ ಬರ ನೀಗಿಸಿಕೊಂಡ ರೂಟ್‌

ಬೃಹತ್ ಮೊತ್ತದತ್ತ ಇಂಗ್ಲೆಂಡ್‌
Last Updated 15 ಜನವರಿ 2021, 14:44 IST
ಅಕ್ಷರ ಗಾತ್ರ

ಗಾಲ್‌: ನಾಯಕ ಜೋ ರೂಟ್ (ಬ್ಯಾಟಿಂಗ್ 168, 254 ಎಸೆತ) ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅನುಭವಿಸಿದ್ದ ಶತಕದ ಬರವನ್ನು ನೀಗಿಸಿಕೊಂಡರು. ಡ್ಯಾನ್ ಲಾರೆನ್ಸ್ (73) ಪದಾರ್ಪಣೆ ಪಂದ್ಯದಲ್ಲೇ ಪ್ರಭಾವಿ ಸಾಮರ್ಥ್ಯ ತೋರಿದರು. ಇವರಿಬ್ಬರ ಆಟದ ಬಲದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿದೆ.

ಪಂದ್ಯದ ಎರಡನೇ ದಿನವಾದ ಶುಕ್ರವಾರ ಮಳೆಯಿಂದಾಗಿ ಚಹಾ ವಿರಾಮದ ಬಳಿಕ ಆಟ ನಡೆಯಲಿಲ್ಲ. ದಿನದಾಟದ ಮುಕ್ತಾಯಕ್ಕೆ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 320 ರನ್ ಗಳಿಸಿತು. ಒಟ್ಟು 185 ರನ್‌ಗಳ ಮುನ್ನಡೆ ಗಳಿಸಿತು.

ರೂಟ್ ಹಾಗೂ ಲಾರೆನ್ಸ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 173 ರನ್‌ ಸೇರಿಸಿದರು. ಗುರುವಾರ 66 ರನ್‌ಗಳಿಸಿದ್ದ ರೂಟ್‌ ಶುಕ್ರವಾರ ತಮ್ಮ 18ನೇ ಟೆಸ್ಟ್ ಶತಕ ಪೂರ್ಣಗೊಳಿಸಿದರು.

2019ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ರೂಟ್ ಕೊನೆಯ ಬಾರಿ ಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಅವರು 226 ರನ್ ಗಳಿಸಿದ್ದರು.

ರೂಟ್ ಹಾಗೂ ಜೋಸ್ ಬಟ್ಲರ್ (7) ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಶ್ರೀಲಂಕಾ: 46.1 ಓವರ್‌ಗಳಲ್ಲಿ 135: ಇಂಗ್ಲೆಂಡ್‌: 94 ಓವರ್‌ಗಳಲ್ಲಿ 4 ವಿಕೆಟ್‌ಗೆ 320(ಜಾನಿ ಬೆಸ್ಟೊ 47, ಜೋ ರೂಟ್ ಬ್ಯಾಟಿಂಗ್‌ 168, ಡ್ಯಾನ್ ಲಾರೆನ್ಸ್ 73; ಲಸಿತ್ ಎಂಬುಲ್ದೆನಿಯಾ 131ಕ್ಕೆ 3, ದಿಲ್ರುವಾನ್ ಪೆರೇರಾ 82ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT