ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ನಾಲ್ಕರ ಘಟ್ಟದಲ್ಲಿ ಕರ್ನಾಟಕ–ಮುಂಬೈ ಹಣಾಹಣಿ

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ: ಗುಜರಾತ್‌ ತಂಡಕ್ಕೆ ಉತ್ತರಪ್ರದೇಶ ಎದುರಾಳಿ
Last Updated 9 ಮಾರ್ಚ್ 2021, 14:02 IST
ಅಕ್ಷರ ಗಾತ್ರ

ನವದೆಹಲಿ: ಪೃಥ್ವಿ ಶಾ ಅಬ್ಬರದ ಶತಕದ ಬಲದಿಂದ ಜಯಭೇರಿ ಬಾರಿಸಿದ ಮುಂಬೈ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು. ಗುರುವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಮರ್ಥ್ ನಾಯಕತ್ವದ ಕರ್ನಾಟಕವನ್ನು ಪೃಥ್ವಿ ಬಳಗವು ಎದುರಿಸಲಿದೆ.

ಮಂಗಳವಾರ ಪಾಲಂ ಏರ್‌ಫೋರ್ಸ್ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 284 ರನ್‌ ಗಳಿಸಿತು. ಅದಕ್ಕುತ್ತರವಾಗಿ ಮುಂಬೈ ತಂಡವು 41.5 ಓವರ್‌ಗಳಲ್ಲಿ 1 ವಿಕೆಟ್‌ಗೆ 285 ರನ್ ಗಳಿಸಿತು. 9 ವಿಕೆಟ್‌ಗಳ ಜಯ ದಾಖಲಿಸಿತು.

ಮುಂಬೈ ತಂಡದ ನಾಯಕ ಪೃಥ್ವಿ ಶಾ (ಔಟಾಗದೆ 185; 123ಎಸೆತ, 21ಬೌಂಡರಿ, 7ಸಿಕ್ಸರ್) ಅವರು ಟೂರ್ನಿಯಲ್ಲಿ ಮೂರನೇ ಶತಕ ಹೊಡೆದರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ಯಶಸ್ವಿ ಜೈಸ್ವಾಲ್ (75; 104ಎಸೆತ, 10ಬೌಂಡರಿ, 1ಸಿಕ್ಸರ್) ಅವರೊಂದಿಗೆ 238 ರನ್‌ ಸೇರಿಸಿದರು.

ಸೋಮವಾರ ನಡೆದಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ತಂಡವು ಕೇರಳದ ವಿರುದ್ಧ ಜಯಿಸಿತ್ತು. ಪಂದ್ಯದಲ್ಲಿ ಆರಂಭಿಕ ಜೋಡಿ ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಶತಕಗಳನ್ನು ಗಳಿಸಿದ್ದರು.

ಉತ್ತರಪ್ರದೇಶಕ್ಕೆ ಜಯ: ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್ ಉಪೇಂದ್ರ ಯಾದವ್ (112; 101ಎ, 11ಬೌಂ, 2ಸಿ) ಅವರ ಅಮೋಘ ಶತಕದ ಬಲದಿಂದ ಉತ್ತರಪ್ರದೇಶ ತಂಡವು ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ 48 ರನ್‌ಗಳಿಂದ ದೆಹಲಿ ತಂಡವನ್ನು ಮಣಿಸಿತು. ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ತಂಡವು ಗುಜರಾತ್ ಎದುರು ಕಣಕ್ಕಿಳಿಯಲಿದೆ.

ಸಂಕ್ಷಿಪ್ತ ಸ್ಕೋರು-

ಸೌರಾಷ್ಟ್ರ: 50 ಓವರ್‌ಗಳಲ್ಲಿ 5ಕ್ಕೆ 284 (ಅವಿ ಬಾರೋಟ್ 37, ಸ್ನೆಲ್ ಪಟೇಲ್ 30, ವಿಶ್ವರಾಜ್ ಜಡೇಜ 53, ಸಮರ್ಥ್ ವ್ಯಾಸ್ ಔಟಾಗದೆ 90, ಚಿರಾಗ್ ಜಾನಿ ಔಟಾಗದೆ 53, ಶಮ್ಸ್‌ ಮುಲಾನಿ 51ಕ್ಕೆ2)

ಮುಂಬೈ : 41.5 ಓವರ್‌ಗಳಲ್ಲಿ 1 ವಿಕೆಟ್‌ಗೆ 285 (ಪೃಥ್ವಿ ಶಾ ಔಟಾಗದೆ 185, ಯಶಸ್ವಿ ಜೈಸ್ವಾಲ್ 75, ಆದಿತ್ಯ ತಾರೆ ಔಟಾಗದೆ 20) ಫಲಿತಾಂಶ: ಮುಂಬೈ ತಂಡಕ್ಕೆ 9 ವಿಕೆಟ್‌ಗಳ ಜಯ.

ಉತ್ತರಪ್ರದೇಶ: 50 ಓವರ್‌ಗಳಲ್ಲಿ 7ಕ್ಕೆ280 (ಕರಣ್ ಶರ್ಮಾ 83, ಉಪೇಂದ್ರ ಯಾದವ್ 112, ಸಮೀರ್‌ ಚೌಧರಿ ಔಟಾಗದೆ 43, ಪ್ರದೀಪ್ ಸಂಗ್ವಾನ್ 49ಕ್ಕೆ2, ಸಮರಜೀತ್ ಸಿಂಗ್ 51ಕ್ಕೆ2)

ದೆಹಲಿ: 48.1 ಓವರ್‌ಗಳಲ್ಲಿ 234 (ಹಿಮ್ಮತ್ ಸಿಂಗ್ 39, ಲಾಲಿ ಯಾದವ್ 61, ಅನುಜ್ ರಾವತ್ 47, ಪ್ರದೀಪ್ ಸಂಗ್ವಾನ್ 26, ಯಶ್ ದಯಾಳ್ 53ಕ್ಕೆ3, ಅಕೀಬ್ ಖಾನ್ 60ಕ್ಕೆ2, ಅಕ್ಷದೀಪ್ ನಾಥ್ 29ಕ್ಕೆ2) ಫಲಿತಾಂಶ: ಉತ್ತರಪ್ರದೇಶ ತಂಡಕ್ಕೆ 48 ರನ್‌ಗಳ ಜಯ.

ಸೆಮಿಫೈನಲ್

ಗುಜರಾತ್– ಉತ್ತರಪ್ರದೇಶ (ಸ್ಥಳ: ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ)

ಕರ್ನಾಟಕ–ಮುಂಬೈ (ಸ್ಥಳ: ಪಾಲಂ ಎ ಕ್ರೀಡಾಂಗಣ, ದೆಹಲಿ)

ಮಾರ್ಚ್‌ 11 ರಂದು ಬೆಳಿಗ್ಗೆ 9ರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT