ಶನಿವಾರ, ಏಪ್ರಿಲ್ 4, 2020
19 °C

ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಚಾಂದಸಿ (17ಕ್ಕೆ4) ಮತ್ತು ಅದಿತಿ ರಾಜೇಶ್‌ (21ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಕರ್ನಾಟಕ ತಂಡ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 82ರನ್‌ಗಳಿಂದ ಛತ್ತೀಸಗಡ ತಂಡವನ್ನು ಸೋಲಿಸಿದೆ.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 191ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ಛತ್ತೀಸಗಡ 37.4 ಓವರ್‌ಗಳಲ್ಲಿ 109ರನ್‌ಗಳಿಗೆ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ; 50 ಓವರ್‌ಗಳಲ್ಲಿ 9 ವಿಕೆಟ್‌ಗೆ 191 (ಕೃಷಿಕಾ ರೆಡ್ಡಿ 21, ಅದಿತಿ ರಾಜೇಶ್‌ 27, ಜಿ.ಆರ್‌.ಪ್ರೇರಣಾ 32, ಎಂ.ಪೂಜಾ ಕುಮಾರಿ 31, ಎಸ್‌.ಚೈತ್ರಾ ಔಟಾಗದೆ 26; ಶಿವಾನಿ ಯಾದವ್‌ 24ಕ್ಕೆ2).

ಛತ್ತೀಸಗಡ:37.4 ಓವರ್‌ಗಳಲ್ಲಿ 109 (ಕುಮುದ್‌ ಸಾಹು 30, ಡಿ.ಈಶಾ ಭಾರತಿ 26; ಅದಿತಿ ರಾಜೇಶ್‌ 21ಕ್ಕೆ3, ಕೆ.ಚಾಂದಸಿ 17ಕ್ಕೆ4). ಫಲಿತಾಂಶ: ಕರ್ನಾಟಕಕ್ಕೆ 82ರನ್‌ ಗೆಲುವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು