ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಕ್ರಿಕೆಟ್ ಟೆಸ್ಟ್‌: ಖ್ವಾಜಾ ಶತಕದ ಸೊಬಗು

ಇಂಗ್ಲೆಂಡ್‌ ವಿರುದ್ಧ ಉತ್ತಮ ಮೊತ್ತ ಪೇರಿಸಿದ ಆಸ್ಟ್ರೇಲಿಯಾ
Last Updated 6 ಜನವರಿ 2022, 17:36 IST
ಅಕ್ಷರ ಗಾತ್ರ

ಸಿಡ್ನಿ: ಎರಡು ವರ್ಷಗಳ ನಂತರ ಮೊದಲ ಬಾರಿ ಕ್ರೀಸ್‌ಗೆ ಇಳಿದ ಉಸ್ಮಾನ್ ಖ್ವಾಜಾ ಮೋಹಕ ಶತಕ ಗಳಿಸಿ ಮಿಂಚಿದರು. ಅವರ ಅಮೋಘ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಆ್ಯಷಸ್ ಕ್ರಿಕೆಟ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿತು.

ಆಸ್ಟ್ರೇಲಿಯಾ 8 ವಿಕೆಟ್‌ಗಳಿಗೆ 416 ರನ್ ಗಳಿಸಿ ಮೊದಲ ಇನಿಂಗ್ಸ್‌ನಲ್ಲಿ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ದಿನದಾಟದ ಮುಕ್ತಾಯದ ವೇಳೆ ಪ್ರವಾಸಿ ಇಂಗ್ಲೆಂಡ್ ತಂಡ ವಿಕೆಟ್ ಕಳೆದುಕೊಳ್ಳದೆ 13 ರನ್ ಗಳಿಸಿದೆ. ‌

ಪಾಕಿಸ್ತಾನ ಮೂಲದ ಉಸ್ಮಾನ್ ಖ್ವಾಜಾ ಅವರು ಕೋವಿಡ್‌ ಸೋಂಕಿಗೆ ಒಳಗಾಗಿ ಕ್ವಾರಂಟೈನ್‌ನಲ್ಲಿರುವ ಟ್ರಾವಿಸ್ ಹೆಡ್ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಮೊದಲ ದಿನದಾಟದಲ್ಲಿ ಎರಡು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಅವರು ಗುರುವಾರ ಸೊಗಸಾದ ಬ್ಯಾಟಿಂಗ್ ಮಾಡಿದರು. 260 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 137 ರನ್ ಗಳಿಸಿದ ಅವರು ಉತ್ತಮ ಜೊತೆಯಾಟಗಳಲ್ಲಿ ಭಾಗಿಯಾದರು.

ಇನಿಂಗ್ಸ್ ಡಿಕ್ಲೇರ್ ಮಾಡುವುದಕ್ಕೂ ಮುನ್ನ ಸ್ಟುವರ್ಟ್ ಬ್ರಾಡ್ ಎಸೆತವನ್ನು ನೇಥನ್ ಲಯನ್ ಮಿಡ್‌ವಿಕೆಟ್ ಮೇಲಿಂದ ಸಿಕ್ಸರ್‌ಗೆ ಎತ್ತಿದರು. ಮಿಚೆಲ್ ಸ್ಟಾರ್ಕ್‌ 34ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

28 ರನ್ ಗಳಿಸಿದ್ದಾಗ ನಾಯಕ ಜೋ ರೂಟ್ ಅವರಿಂದ ಜೀವದಾನ ಪಡೆದಿದ್ದ ಖ್ವಾಜಾ ಪುನರಾಗಮನವನ್ನು ಸಂಭ್ರಮಿಸಿದರು. ಸ್ಟುವರ್ಟ್ ಬ್ರಾಡ್‌ಗೆ ಐದನೇ ವಿಕೆಟ್‌ ರೂಪದಲ್ಲಿ ಬಲಿಯಾದ ಅವರು ಕ್ರೀಸ್‌ನಲ್ಲಿದ್ದಷ್ಟು ಕಾಲ ಸುಂದರ ಹೊಡೆತಗಳ ಮೂಲಕ ರಂಜಿಸಿದರು. ಇದು ಅವರ ಒಂಬತ್ತನೇ ಟೆಸ್ಟ್ ಶತಕವಾಗಿದೆ. ಸಿಡ್ನಿಯಲ್ಲಿ, ಇಂಗ್ಲೆಂಡ್ ವಿರುದ್ಧ ನಾಲ್ಕು ವರ್ಷಗಳ ಹಿಂದೆ 171 ರನ್ ಗಳಿಸಿದ ನಂತರ ಖ್ವಾಜಾ ಬ್ಯಾಟಿನಿಂದ ಶಕತ ಹೊಮ್ಮಿರಲಿಲ್ಲ.

ಚಹಾ ವಿರಾಮಕ್ಕೆ ಸ್ವಲ್ಪ ಮುನ್ನ ಸ್ಪಿನ್ನರ್ ಜ್ಯಾಕ್ ಲೀಚ್ ಅವರ ಎಸೆತವನ್ನು ಬ್ಯಾಕ್‌ವರ್ಡ್ ಸ್ಕ್ವೇರ್‌ಲೆಗ್‌ ಕಡೆಗೆ ಅಟ್ಟಿ ಮೂರು ರನ್ ಗಳಿಸುವ ಮೂಲಕ ಈ ಎಡಗೈ ಬ್ಯಾಟರ್ ಮೂರಂಕಿ ಪೂರೈಸಿದರು.

ಸ್ಟೀವನ್ ಸ್ಮಿತ್ (67; 141 ಎಸೆತ, 5 ಬೌಂಡರಿ) ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 134 ಓವರ್‌ಗಳಲ್ಲಿ 8ಕ್ಕೆ 416 ಡಿಕ್ಲೇರ್‌ (ಸ್ಟೀವನ್ ಸ್ಮಿತ್ 67, ಉಸ್ಮಾನ್ ಖ್ವಾಜಾ 137, ಪ್ಯಾಟ್ ಕಮಿನ್ಸ್ 24, ಮಿಚೆಲ್ ಸ್ಟಾರ್ಕ್‌ ಔಟಾಗದೆ 34, ನೇಥನ್ ಲಯನ್ ಔಟಾಗದೆ 16; ಜೇಮ್ಸ್‌ ಆ್ಯಂಡರ್ಸನ್ 54ಕ್ಕೆ1, ಸ್ಟುವರ್ಟ್‌ ಬ್ರಾಡ್ 101ಕ್ಕೆ5, ಮಾರ್ಕ್ ವುಡ್‌ 76ಕ್ಕೆ1, ಜೋ ರೂಟ್ 36ಕ್ಕೆ1); ಇಂಗ್ಲೆಂಡ್‌: 5 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 13 (ಹಸೀಬ್ ಹಮೀದ್ ಬ್ಯಾಟಿಂಗ್ 2, ಜ್ಯಾಕ್ ಕ್ರಾವ್ಲಿ ಬ್ಯಾಟಿಂಗ್ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT