ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | ದಾಖಲೆ ಬರೆದ ಚಾಹಲ್; KKR ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ರಾಯಲ್ಸ್

Published 11 ಮೇ 2023, 16:13 IST
Last Updated 11 ಮೇ 2023, 16:13 IST
ಅಕ್ಷರ ಗಾತ್ರ

ಕೋಲ್ಕತ್ತ: ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಅವರ ಅಮೋಘ ಬೌಲಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್‌ ಬಳಗವನ್ನು 150 ರನ್‌ ಗಡಿ ದಾಟದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಎಡಗೈ ಬ್ಯಾಟರ್‌ ವೆಂಕಟೇಶ್‌ ಅಯ್ಯರ್‌ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರಿಂದ ರೈಡರ್ಸ್ ಪಡೆ ನಿಗದಿತ 20 ಓವರ್‌ಗಳಲ್ಲಿ 149 ರನ್‌ಗಳಿಸಲಷ್ಟೇ ಶಕ್ತವಾಯಿತು.

ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 42 ಎಸೆತಗಳನ್ನು ಎದುರಿಸಿದ ಅಯ್ಯರ್‌, 4 ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 57 ರನ್‌ ಕಲೆಹಾಕಿದರು.

ರಾಯಲ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಮಾಡಿದ ಚಾಹಲ್, ರೈಡರ್ಸ್‌ ಪಡೆಯ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಕೊಟ್ಟರು. ಅವರು 4 ಓವರ್‌ಗಳಲ್ಲಿ 25 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು. ಆ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಉಳಿದಂತೆ ವೇಗಿ ಟ್ರೆಂಟ್‌ ಬೌಲ್ಟ್‌ 2 ವಿಕೆಟ್‌ ಪಡೆದರೆ, ಸಂದೀಪ್‌ ಶರ್ಮಾ ಮತ್ತು ಕೆ.ಎಂ. ಆಸಿಫ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಐವರು
01. ಯಜುವೇಂದ್ರ ಚಾಹಲ್ (ಭಾರತ): 143 ಪಂದ್ಯಗಳಲ್ಲಿ 187 ವಿಕೆಟ್‌
02. ಡ್ವೇನ್‌ ಬ್ರಾವೊ (ವೆಸ್ಟ್‌ ಇಂಡೀಸ್‌): 161 ಪಂದ್ಯಗಳಲ್ಲಿ 183 ವಿಕೆಟ್‌
03. ಪಿಯೂಷ್‌ ಚಾವ್ಲ (ಭಾರತ): 176 ಪಂದ್ಯಗಳಲ್ಲಿ 174 ವಿಕೆಟ್‌
04. ಅಮಿತ್‌ ಮಿಶ್ರಾ (ಭಾರತ): 160 ಪಂದ್ಯಗಳಲ್ಲಿ 172 ವಿಕೆಟ್‌
05. ರವಿಚಂದ್ರನ್‌ ಅಶ್ವಿನ್‌ (ಭಾರತ): 196 ಪಂದ್ಯಗಳಲ್ಲಿ 171 ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT