ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್‌: ಬೆಂಗಳೂರು ತಂಡಕ್ಕೆ ಮೊದಲ ಜಯ

ಮಳೆಯ ಆಟದ ನಡುವೆ ಮೊದಲ ಸೋಲು ಅನುಭವಿಸಿದ ಬಳ್ಳಾರಿ
Last Updated 22 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ. ಗೌತಮ್ ಅವರ ವಿಕೆಟ್‌ ದುಬಾರಿಯಾಯಿತು.

ಗುರುವಾರ ಸಂಜೆ ಮಳೆಯಿಂದ ಅಸ್ತ ವ್ಯಸ್ತವಾದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಒಂದು ರನ್ ಜಯ ಸಾಧಿಸಲು ಕಾರಣವಾಯಿತು. ಬ್ಲಾಸ್ಟರ್ಸ್‌ಗೆ ಇದು ಮೊದಲ ಜಯ. ಬಳ್ಳಾರಿಗೆ ಪ್ರಥಮ ಸೋಲು.

ಟಾಸ್ ಗೆದ್ದ ಬಳ್ಳಾರಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಳೂರು ತಂಡವು 11 ಓವರ್‌ಗಳಲ್ಲಿ 4 ವಿಕೆ ಟ್‌ಗೆ 58 ರನ್ ಗಳಿಸಿದ್ದಾಗ ಮಳೆ ಶುರು ವಾಯಿತು. ನಿಂತ ಮೇಲೆ 16 ಓವರ್‌ಗ ಳಿಗೆ ಇನಿಂಗ್ಸ್‌ ಪರಿಷ್ಕರಿಸಲಾಯಿತು.

ನಂತರ ಐದು ಓವರ್‌ ಆಡಿದ ಬೆಂಗಳೂರು ತಂಡವು ನೂರರ ಗಡಿ ದಾಟಲಿಲ್ಲ. 8 ವಿಕೆಟ್‌ ಕಳೆದುಕೊಂಡು 93 ರನ್ ಗಳಿಸಿತು. ಗುರಿ ಬೆನ್ನತ್ತಿದ ಬಳ್ಳಾರಿ ತಂಡವು 8.2 ಓವರ್‌ಗಳಲ್ಲಿ 55 ರನ್ ಗಳಿಸಿ ಐದು ವಿಕೆಟ್‌ ಕಳೆದುಕೊಂಡಿತು. ಆಗ ಮಳೆ ಜೋರಾಗಿ ಸುರಿಯಿತು. ಸಂಜೆ 6.30ರ ವೇಳೆಗೆ ಪಂದ್ಯವನ್ನು ಸ್ಥಗಿತಗೊಳಿಸಿ ಫಲಿತಾಂಶ ನೀಡಲಾಯಿತು.

ವಿ.ಜಯದೇವನ್ ನಿಯಮದನ್ವಯ 8.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 56 ರನ್‌ ಗಳಿಸಿಬೇಕಿತ್ತು. ಆದರೆ, ಒಂದು ವಿಕೆಟ್ ಹೆಚ್ಚು ಕಳೆದುಕೊಂಡಿದ್ದ ಬಳ್ಳಾರಿ ಸೋತಿತು. ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ರೆಡ್ಡಿ (30; 23 ಎಸೆತ, 4ಬೌಂಡರಿ, 1ಸಿಕ್ಸರ್) ಒಬ್ಬರೇ ಎರಡಂಕಿ ಮೊತ್ತ ಗಳಿಸಿದರು. ಉಳಿ ದವರು ಒಂದಂಕಿಗೆ ಔಟಾದರು. ತಂಡದ ಮೊತ್ತವು 8.1 ಓವರ್‌ಗಳಲ್ಲಿ 54 ರನ್‌ಗಳಾಗಿದ್ದಾಗ ಸಿ.ಎಂ. ಗೌತಮ್ ಅವರು ವಿಕೆಟ್‌ಕೀಪರ್‌ ಶರತ್‌ಗೆ ಕ್ಯಾಚಿತ್ತರು. ಈ ಒಂದು ಎಸೆತವನ್ನು ಅವರು ಏಕಾಗ್ರತೆಯಿಂದ ಎದುರಿಸಿದ್ದರೆ ಬಳ್ಳಾರಿ ತಂಡಕ್ಕೆ ಜಯದ ಹಾದಿ ಸುಗಮವಾಗುತ್ತಿತ್ತು. ಬೆಂಗಳೂರು ತಂಡದ ಮನೋಜ್ ಬಾಂಢಗೆ ಮತ್ತು ಭರತ್ ಧುರಿ ತಲಾ ಎರಡು ವಿಕೆಟ್ ಗಳಿಸಿದರು.

ಬಳ್ಳಾರಿ ತಂಡವು ತನ್ನ ಮೂರು ಪಂದ್ಯಗಳಲ್ಲಿಯೂ ಗೆದ್ದಿತ್ತು.

ಸಂಕ್ಷಿಪ್ತ ಸ್ಕೋರು: ಬೆಂಗಳೂರು ಬ್ಲಾಸ್ಟರ್ಸ್: 16 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 93 (ರೋಹನ್ ಕದಂ 22, ಬಿ.ಆರ್. ಶರತ್ 16, ಆರ್. ಜೊನಾಥನ್ 16, ನಾಗಭರತ್ 16, ಪ್ರಸಿದ್ಧಕೃಷ್ಣ 22ಕ್ಕೆ1, ಕೆ. ಗೌತಮ್ 22ಕ್ಕೆ1, ಅಬ್ರಾರ್ ಖಾಜಿ 15ಕ್ಕೆ3), ಬಳ್ಳಾರಿ ಟಸ್ಕರ್ಸ್: 8.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 55 (ಅಭಿಷೇಕ್ ರೆಡ್ಡಿ 30, ಮನೋಜ್ ಬಾಂಢಗೆ 17ಕ್ಕೆ2, ಆನಂದ ದೊಡ್ಡಮನಿ 8ಕ್ಕೆ1, ಭರತ್ ಧುರಿ 9ಕ್ಕೆ2) ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್‌ಗೆ 1 ರನ್ ಜಯ (ವಿಜೆಡಿ ನಿಯಮ).

ಇಂದಿನ ಪಂದ್ಯಗಳು
ಬೆಳಗಾವಿ ಪ್ಯಾಂಥರ್ಸ್–ಬೆಂಗಳೂರು ಬ್ಲಾಸ್ಟರ್ಸ್‌ (ಮಧ್ಯಾಹ್ನ 3)ಶಿವಮೊ
ಗ್ಗ ಲಯನ್ಸ್‌–ಬಳ್ಳಾರಿ ಟಸ್ಕರ್ಸ್‌ (ಸಂಜೆ 7).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT