ಬೆಂಗಳೂರು: ಕೇರಳ ರಾಜ್ಯ ತಂಡದಲ್ಲಿ ಆಡುತ್ತಿರುವ ರಾಬಿನ್ ಉತ್ತಪ್ಪ ಮತ್ತು ಇಂಗ್ಲೆಂಡ್‌ನಲ್ಲಿರುವ ಸ್ಟುವರ್ಟ್ ಬಿನ್ನಿ ಅವರು ಕೆಪಿಎಲ್ ಬಿಡ್ ಪ್ರಕ್ರಿಯೆಯಲ್ಲಿ ಸ್ಪರ್ಧಿಸಲಿಲ್ಲ.
‘ರಾಬಿನ್ ಇವತ್ತು ಬೆಳಿಗ್ಗೆ (ಶನಿವಾರ) ಸ್ಪರ್ಧೆಯಿಂದ ಹಿಂದೆ ಸರಿದರು. ಕೇರಳ ತಂಡದ ಪರವಾಗಿ ಅವರು ಆಡುತ್ತಿದ್ದಾರೆ. ಆದ್ದರಿಂದ ಅವರೇ ಈ ನಿರ್ಧಾರ ಕೈಗೊಂಡು ಮಾಹಿತಿ ನೀಡಿದರು. ಬಿನ್ನಿ ಇಂಗ್ಲೆಂಡ್‌ನಲ್ಲಿದ್ದಾರೆ’ ಎಂದು ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದರು.