ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌: ಹುಬ್ಬಳ್ಳಿ ಟೈಗರ್ಸ್‌ಗೆ ಜಯ

Last Updated 19 ಆಗಸ್ಟ್ 2018, 20:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಲ್‌ರೌಂಡ್‌ ಪ್ರದರ್ಶನ ನೀಡಿದ ಹುಬ್ಬಳ್ಳಿ ಟೈಗರ್ಸ್ ತಂಡ ಕೆಪಿಎಲ್‌ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ಎದುರು 25 ರನ್‌ಗಳ ಗೆಲುವು ಪಡೆಯಿತು.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೈಗರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 160 ರನ್ ಗಳಿಸಿತು. ಸವಾಲಿನ ಗುರಿ ಎದುರು ಆರಂಭ
ದಿಂದಲೇ ಪರದಾಡಿದ ಶಿವಮೊಗ್ಗ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 135 ರನ್‌ ಗಳಿಸಿ ಹೋರಾಟ ಮುಗಿಸಿತು.

ವಿನಯ್‌ ಕುಮಾರ್ ನಾಯಕತ್ವದ ಟೈಗರ್ಸ್ ತಂಡ ಈ ಬಾರಿಯಟೂರ್ನಿಯಲ್ಲಿ ಪಡೆದ ಸತತ ಎರಡನೇ ಗೆಲುವು ಇದು. ಬೆಂಗಳೂರಿನಲ್ಲಿ ಬಿಜಾಪುರ ಬುಲ್ಸ್‌ ಎದುರು ಜಯ ಪಡೆದಿತ್ತು.

ಆರಂಭದಲ್ಲಿ ರನ್‌ ಗಳಿಸಲು ಪರದಾಡಿದ ಹುಬ್ಬಳ್ಳಿ ಟೈಗರ್ಸ್ಬ್ಯಾಟ್ಸ್‌ಮನ್‌ಗಳು ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದರು. ಮೊದಲ 10 ಓವರ್‌ಗಳು ಪೂರ್ಣಗೊಂಡರೂ 55 ರನ್‌ಗಳಷ್ಟೇ ಆಗಿದ್ದವು. ಕೊನೆಯ ಹತ್ತು ಓವರ್‌ಗಳಲ್ಲಿ 105 ರನ್‌ ಬಂದವು. ಐದನೇ ವಿಕೆಟ್‌ ಜೊತೆಯಾಟದಲ್ಲಿ ವಿನಯ್‌ ಮತ್ತು ಪ್ರವೀಣ್ ದುಬೆ ಕೇವಲ 24 ಎಸೆತಗಳಲ್ಲಿ 46 ರನ್‌ ಕಲೆಹಾಕಿದರು. ಕೊನೆಯ ಓವರ್‌ನಲ್ಲಿ ಎಂ.ಬಿ. ದರ್ಶನ್ ಹ್ಯಾಟ್ರಿಕ್‌ ಸಿಕ್ಸರ್‌ ಬಾರಿಸಿದರು.

ಹಿಂದಿನ ಪಂದ್ಯದಲ್ಲಿಯೂ ಚುರುಕಿನ ಬೌಲಿಂಗ್‌ ಮೂಲಕ ಟೈಗರ್ಸ್ ಜಯ ಪಡೆದಿತ್ತು, ಇಲ್ಲಿಯೂ ಆ ತಂಡದ ಬೌಲಿಂಗ್‌ ಪಡೆಯು ಪ್ರಮುಖಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿತು. ಕ್ರಾಂತಿಕುಮಾರ್‌, ದರ್ಶನ್‌ ಮತ್ತು ಮಹೇಶ ಪಾಟೀಲ್‌ ತಲಾ ಎರಡು ವಿಕೆಟ್‌ ಪಡೆದು ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್‌ 20 ಓವರ್‌ಗಳಲ್ಲಿ 7ಕ್ಕೆ160 (ಅಭಿಷೇಕ್‌ ರೆಡ್ಡಿ 13, ಸುನೀಲಕುಮಾರ ಜೈನ್‌23, ನಿತಿನ್‌ ಭಿಲ್ಲೆ 15, ಪ್ರವೀಣ ದುಬೆ43, ಆರ್‌. ವಿನಯ ಕುಮಾರ್‌ 35, ಎಂ.ಬಿ. ದರ್ಶನ್‌ ಔಟಾಗದೆ 18; ಆದಿತ್ಯ ಸೋಮಣ್ಣ 33ಕ್ಕೆ2, ಕೆ. ಹೊಯ್ಸಳ 36ಕ್ಕೆ2, ಅನಿರುದ್ಧ ಜೋಶಿ 20ಕ್ಕೆ1, ಪೃಥ್ವಿರಾಜ್‌ ಶೇಖಾವತ್‌ 18ಕ್ಕೆ2).

ಶಿವಮೊಗ್ಗ ಲಯನ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 135 (ಲಿಯಾನ್‌ ಖಾನ್‌ 16, ಬಿ.ಆರ್‌. ಶರತ್‌ 12, ಆರ್‌. ಜೊನಾಥನ್‌ 29, ಅನಿರುದ್ಧ ಜೋಶಿ 15, ಪೃಥ್ವಿರಾಜ್‌ 25; ಕ್ರಾಂತಿ ಕುಮಾರ್‌ 29ಕ್ಕೆ2, ಎಂ.ಬಿ. ದರ್ಶನ್‌ 37ಕ್ಕೆ2, ಬಿ.ಎಂ. ಮಹೇಶ ಪಾಟೀಲ 19ಕ್ಕೆ2). ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 25 ರನ್ ಗೆಲುವು.

ಇಂದಿನ ಪಂದ್ಯ

ಬಳ್ಳಾರಿ ಟಸ್ಕರ್ಸ್‌–ಮೈಸೂರು ವಾರಿಯರ್ಸ್‌
ಸಮಯ: ಸಂಜೆ 6.40ಕ್ಕೆ.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT