ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಎಗೆ ಕೆಎಸ್‌ಸಿಎ ಕ್ಯೂರೇಟರ್ ಪ್ರಶಾಂತ್

Published 21 ಮೇ 2024, 21:30 IST
Last Updated 21 ಮೇ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಖ್ಯ ಕ್ಯೂರೇಟರ್ ಎಲ್‌. ಪ್ರಶಾಂತ್ ರಾವ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಗೆ(ಎನ್‌ಸಿಎ) ನೇಮಕ ಮಾಡಲಾಗಿದೆ. 

ರಾವ್ ಅವರಿಗೆ ಕ್ಯೂರೇಟರ್ ಆಗಿ 11 ವರ್ಷಗಳಿಂದ ಕಾರ್ಯನಿರ್ವಹಿಸಿದ ಅನುಭವ ಇದೆ. ಅಲ್ಲದೇ  2019ರಿಂದ ಬಿಸಿಸಿಐ ಎಲೀಟ್ ಪ್ಯಾನೆಲ್‌ ಕ್ಯೂರೇಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರು ಎನ್‌ಸಿಎನಲ್ಲಿ ಮುಖ್ಯ ಕ್ಯೂರೇಟರ್‌ ಆಗಿ ಕಾರ್ಯನಿರ್ವಹಿಸುವರು.

‘ಬಹಳ ಸಂತಸವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯೂರೇಟರ್ ಆಗಿ ಕಾರ್ಯನಿರ್ವಹಿಸಿದ್ದು ಒಳ್ಳೆಯ ಅನುಭವ. ಹೊಸ ಜವಾಬ್ದಾರಿ ನಿಭಾಯಿಸಲು ಉತ್ಸುಕನಾಗಿರುವೆ’ ಎಂದು ರಾವ್ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT