ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕುಲಶೇಖರ ವಿದಾಯ

Last Updated 24 ಜುಲೈ 2019, 19:43 IST
ಅಕ್ಷರ ಗಾತ್ರ

ಕೊಲಂಬೊ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 2011ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಮಹೇಂದ್ರಸಿಂಗ್ ಧೋನಿ ಹೊಡೆದಿದ್ದ ‘ವಿಜಯದ ಸಿಕ್ಸರ್‌’ ಮರೆಯಲು ಸಾಧ್ಯವೇ? ಅಂದು ಆ ಎಸೆತ ಹಾಕಿದ್ದ ಶ್ರೀಲಂಕಾದ ನುವಾನ ಕುಲಶೇಖರ ಅವರು ಕಣ್ಣೀರಾಗಿದ್ದರು.

ಲಂಕಾ ಕ್ರಿಕೆಟ್‌ನ ಶ್ರೇಷ್ಠ ಮಧ್ಯಮವೇಗಿಗಳಲ್ಲಿ ಒಬ್ಬರಾಗಿರುವ ನುವಾನ ಕುಲಶೇಖರ ಅವರು ಬುಧವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಲಂಕಾದ ಚಮಿಂದಾ ವಾಸ್ ಮತ್ತು ಲಸಿತ್ ಮಾಲಿಂಗ ಅವರ ನಂತರ ಹೆಚ್ಚು ವಿಕೆಟ್‌ ಗಳಿಸಿದ ಹೆಗ್ಗಳಿಕೆ ಅವರದ್ದು.

37 ವರ್ಷದ ನುವಾನ್ ಅವರು ಸುಮಾರು 21 ವರ್ಷಗಳ ಕಾಲ ಕ್ರಿಕೆಟ್ ಆಡಿದ್ಧಾರೆ. 21 ಟೆಸ್ಟ್‌ಗಳಲ್ಲಿ 48 ವಿಕೆಟ್‌; 184 ಏಕದಿನ ಪಂದ್ಯಗಳಲ್ಲಿ 199 ವಿಕೆಟ್‌ ಮತ್ತು 58 ಟ್ವೆಂಟಿ–20 ಪಂದ್ಯಗಳಲ್ಲಿ 66 ವಿಕೆಟ್‌ಗಳನ್ನು ಗಳಿಸಿದ್ದಾರೆ. 2009ರಲ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು. ಅವರು 2011–12ರಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡಿದ್ದರು.

2017ರಲ್ಲಿ ಅವರು ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯ ಆಡಿದ ನಂತರ ಅವರು ಲಂಕಾ ತಂಡಕ್ಕೆ ಆಯ್ಕೆಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT