ನವದೆಹಲಿ: ಲಖನೌ ಸೂಪರ್ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿರುವ ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದರಿಂದ ದೂರ ಉಳಿಯಲು ಆಟಗಾರ ಕೆ.ಎಲ್. ರಾಹುಲ್ ಅವರ ‘ಸಲಹೆ’ ಕಾರಣವೆಂದು ಹೇಳಿದ್ದಾರೆ.

‘ಭಾರತ ತಂಡದ ಕೋಚ್ ಆಗಿ ನೇಮಕಕ್ಕೆ ಪ್ರಯತ್ನಿಸಲು ಯೋಚಿಸಿದ್ದೆ. ಅದಕಾಗಿ ನಮ್ಮ ತಂಡದ (ಲಖನೌ) ನಾಯಕ ರಾಹುಲ್ ಜೊತೆಗೆ ಮಾತನಾಡಿದ್ದೆ. ಆಗ ಅವರು, ಐಪಿಎಲ್ ತಂಡದಲ್ಲಿರುವ ಒತ್ತಡ ಹಾಗೂ ರಾಜಕೀಯದ ಪ್ರಮಾಣವು ಭಾರತ ತಂಡದಲ್ಲಿ ಸಾವಿರ ಪಟ್ಟು ಹೆಚ್ಚಿರುತ್ತದೆ ಎಂದು ರಾಹುಲ್ ಹೇಳಿದ್ದರು. ಅವರ ಸಲಹೆ ಉತ್ತಮವಾಗಿದೆ. ಮುಖ್ಯ ಕೋಚ್ ಆಗುವುದು ಪ್ರತಿಷ್ಠೆಯ ವಿಷಯವೇ. ಆದರೆ ನಾನು ದೂರ ಉಳಿಯಲು ನಿರ್ಧರಿಸಿದೆ’ ಎಂದು ಲ್ಯಾಂಗರ್ ‘ಬಿಬಿಸಿ ಸ್ಟಂಪ್ಡ್’ ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ.

ಮೇ 2018 ರಿಂದ 2022ರ ಫೆಬ್ರುವರಿಯವರೆಗೆ ಲ್ಯಾಂಗರ್ ಅವರು ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿಯೇ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಹಾಗೂ ಆ್ಯಷಸ್ ಟ್ರೋಫಿ ಜಯಿಸಿತ್ತು.

ಇದೇ ಅವಧಿಯಲ್ಲಿ ಆಸ್ಟ್ರೇಲಿಯಾದ ಆಟಗಾರರು ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಪ್ರಕರಣ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.