ಚೆಸ್ಟರ್ ಲೀ ಸ್ಟ್ರೀಟ್: ರಾಡ್ ಲಥಾಮ್ ಅವರು 1992ರ ಆವೃತ್ತಿಯ ವಿಶ್ವಕಪ್ ಸೆಮಿಫೈನಲ್ ತಲುಪಿದ ನ್ಯೂಜಿಲೆಂಡ್ ತಂಡದಲ್ಲಿದ್ದರು.

ಹಾಲಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಇನ್ನೂ ಮುಂದಿನ ಹಂತಕ್ಕೆ ಒಯ್ಯಲು ದೃಢಚಿತ್ತರಾಗಿರುವುದಾಗಿ ವಿಕೆಟ್ ಕೀಪರ್ –ಬ್ಯಾಟ್ಸ್‌ಮನ್ ಆಗಿರುವ ಅವರ ಪುತ್ರ ಟಾಮ್ ಲಥಾಮ್ ಹೇಳಿದ್ದಾರೆ.

ನ್ಯೂಜಿಲೆಂಡ್ ಒಮ್ಮೆಯೂ ವಿಶ್ವಕಪ್ ಗೆದ್ದುಕೊಂಡಿಲ್ಲ. ಗುರುವಾರ ಇಂಗ್ಲೆಂಡ್ ಎದುರು 119 ರನ್‌ಗಳಿಂದ ಸೋತರೂ, ನ್ಯೂಜಿಲೆಂಡ್ ವಿಶ್ವಕಪ್ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪಾಕಿಸ್ತಾನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ‘ಪವಾಡ ಸದೃಶ’ ರೀತಿಯಲ್ಲಿ ಗೆದ್ದರಷ್ಟೇ, ನ್ಯೂಜಿಲೆಂಡ್ ತಂಡವನ್ನು ಹೊರಗಟ್ಟಬಹುದು

ರಾಡ್ ಲಥಾಮ್, ಕಿವೀಸ್ ತಂಡದ ಪರ 33 ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ– ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ವಿಶ್ವ ಕಪ್‌ನಲ್ಲಿ ಆಡಿದ ತಂಡದ ಲ್ಲಿದ್ದರು.

‘ಟೂರ್ನಿಯ ಬಗ್ಗೆ ಕೆಲವು ವರ್ಷ ಗಳಿಂದ ಅವರ ಜೊತೆ ಮಾತನಾಡಿದ್ದೇನೆ. ಈಗಿನ ಮಾದರಿಯಲ್ಲೇ (ರೌಂಡ್ ರಾಬಿನ್ ಲೀಗ್) ಆ ಟೂರ್ನಿ ನಡೆದಿತ್ತು. ನಾವು ಇನ್ನೂ ಉತ್ತಮ ಪ್ರದರ್ಶನ ನೀಡಬಹುದೆಂಬ ವಿಶ್ವಾಸವಿದೆ’ ಎಂದು 27 ವರ್ಷದ ಟಾಮ್ ಹೇಳಿದರು. ತಂಡದ ಉಪನಾಯಕ ಕೂಡ ಆಗಿರುವ ಟಾಮ್, ಎರಡು ವರ್ಷ ಡರ್ಹ್ಯಾಮ್ ಕೌಂಟಿ ತಂಡಕ್ಕೆ ಆಡಿದ್ದು, ಈ ಕೌಂಟಿಯಿರುವ ರಿವರ್‌ಸೈಡ್ ಪರಿಸರ ಅವರಿಗೆ ಪರಿಚಿತ. ನ್ಯೂಜಿಲೆಂಡ್‌ಗೆ, ಇಂಗ್ಲೆಂಡ್ ವಿರುದ್ಧದ ಸೋಲು ಈ ಟೂರ್ನಿಯಲ್ಲಿ ಸತತ ಮೂರನೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.