ಲೀಡ್ಸ್: ಕ್ರಿಕೆಟ್ನ ಎಲ್ಲ ಮಾದರಿಗಳಲ್ಲಿಯೂ ಟೆಸ್ಟ್ ಅಗಾಧ ಸವಾಲಿನದ್ದು ಎಂದು ಹೇಳಲಾಗುತ್ತದೆ. ಏಕೆಂದರೆ ಅಪಾರವಾದ ಏಕಾಗ್ರತೆ ಮತ್ತು ನಿರಂತರವಾಗಿ ಒಂದೇ ಲಯದಲ್ಲಿ ಆಡಬೇಕು. ಒಂದಿಷ್ಟು ಸಮತೋಲನ ತಪ್ಪಿದರೂ ಇನಿಂಗ್ಸ್ ಕೈಜಾರುತ್ತದೆ. ಈ ಮಾತಿಗೆ ತಕ್ಕ ಉದಾಹರಣೆಯೆಂದರೆ ಶನಿವಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್.

ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಶುಕ್ರವಾರ ಬೆಳಿಗ್ಗೆಯಿಂದ ಎರಡನೇ ದಿನದ ಮೊದಲ ಅವಧಿಯ ಬಹುತೇಕ ಭಾಗದಲ್ಲಿ ಪಾರಮ್ಯ ಮೆರೆದಿದ್ದು ಭಾರತ. ಅರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಸುಂದರ ಶತಕ. ನಾಯಕ ಶುಭಮನ್ ಗಿಲ್ ಅವರ ಅಜೇಯ ಶತಕವು ಮೊದಲ ದಿನದ ಹೈಲೈಟ್ ಆಗಿದ್ದವು. ಉಪನಾಯಕ ರಿಷಭ್ ಪಂತ್ (ಅಜೇಯ 65) ಕೂಡ ಮಿಂಚಿದ್ದರು. ದಿನದಾಟದ ಅಂತ್ಯಕ್ಕೆ ಭಾರತದ ಸ್ಕೋರ್ 3 ವಿಕೆಟ್ಗಳಿಗೆ 359 ರನ್ಗಳಾಗಿದ್ದವು.

ಕ್ರೀಸ್ನಲ್ಲಿ ಉಳಿದಿದ್ದ ಪಂತ್ ಮತ್ತು ಗಿಲ್ ಅವರು ಶನಿವಾರವೂ ತಮ್ಮ ಆಟ ಮುಂದುವರಿಸಿದರು. ಅವರಿಬ್ಬರ ಅಂದ, ಚೆಂದ ಮತ್ತು ವೇಗದ ಆಟಕ್ಕೆ ರನ್ಗಳು ಹರಿದುಬರತೊಡಗಿದವು. ಇದರಿಂದಾಗಿ ತಮಡವು 600 ರನ್ಗಳ ಮೊತ್ತ ಮುಟ್ಟುವ ನಿರೀಕ್ಷೆ ಗರಿಗೆದರಿತ್ತು. ತುಸು ತಂಪಾಗಿದ್ದ ವಾತಾವರಣದಲ್ಲಿ, ಮೋಡವೂ ಆವರಿಸಿತ್ತು. ಬೌಲರ್ಗಳು ಹೊಸ ಚೆಂಡಿನಲ್ಲಿ ಚುರುಕಾದ ದಾಳಿ ಸಂಘಟಿಸಿದರು. ಆದರೆ ಗಿಲ್ ಮತ್ತು ಪಂತ್ ಅವರ ಏಕಾಗ್ರತೆ ಭಂಗ ಬರಲಿಲ್ಲ. ಗಿಲ್ ಅವರ ಸೊಗಸಾದ ಹೊಡೆತಗಳು ಕಣ್ಮನ ಸೆಳೆದವು. ಇನ್ನೊಂದೆಡೆ ಪಂತ್ ಅವರ ಅಸಾಂಪ್ರಾದಾಯಿಕ ಹೊಡೆತಗಳ ಸಾಹಸದ್ದೇ ಭಯವಿತ್ತು. ಆದರೆ ಅವರಿಗೆ ಯಾವ ಭಯವೂ ಇರಲಿಲ್ಲ. ಚಾಣಾಕ್ಷತೆಯಿಂದ ಎಸೆತಗಳನ್ನು ಆಯ್ಕೆ ಮಾಡಿ ತಮ್ಮ ‘ಜಿಮ್ನಾಸ್ಟಿಕ್ಸ್ ಕೌಶಲ’ ತೋರಿಸಿಯೇ ಬಿಟ್ಟರು. ಸ್ಕೂಪ್, ರಿವರ್ಸ್ ಸ್ಕೂಪ್ ಇತ್ಯಾದಿ ಹೊಡೆತಗಳನ್ನು ಆಡಿದರು. ಈ ನಡುವೆ ದಿನದ ಮೊದಲ ಒಂದು ಗಂಟೆಯು ಸರಿದುಹೋಗಿದ್ದು ಗೊತ್ತೇ ಆಗಲಿಲ್ಲ. ಈ ಅವಧಿಯು ಬ್ಯಾಟಿಂಗ್ಗೆ ಸವಾಲಿನದಾಗಿತ್ತು.

ಪಂತ್ 90ರ ಗಡಿ ದಾಟಿದಾಗ ಭಾರತದ ಅಭಿಮಾನಿಗಳಲ್ಲಿ ತುಸು ಒತ್ತಡದ ಛಾಯೆ ಆವರಿಸಿತ್ತು. ಪಂತ್ ಅವರ ಹೆಸರಲ್ಲಿ ‘ನರ್ವಸ್ ನೈಂಟಿ’ ದಾಖಲೆಗಳಿರುವುದೇ ಅದಕ್ಕೆ ಕಾರಣ. ಈ ಸಲವೂ ಅವರು ತಮ್ಮ ಹುಡುಗಾಟ ಬಿಡಲಿಲ್ಲ. ಶತಕ ಪೂರೈಕೆಗೆ ಬೇಕಾಗಿದ್ದ ರನ್ಗಳನ್ನು ಸಿಂಗಲ್ ಹ್ಯಾಂಡ್ ಸಿಕ್ಸರ್ನಿಂದಲೇ ಪೂರೈಸಿದರು. ಸ್ಪಿನ್ನರ್ ಶೋಯಬ್ ಬಷೀರ್ ಎಸೆತವನ್ನು ಬೌಂಡರಿಗೆರೆ ದಾಟಿಸಿದ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 7ನೇ ಶತಕ ದಾಖಲಿಸಿದರು. ಇದರೊಂದಿಗೆ ಗಿಲ್ ಅವರೊಂದಿಗಿನ ಜೊತೆಯಾಟದಲ್ಲಿ 209 ರನ್ಗಳನ್ನು ಸೇರಿಸಿದರು.

ಈ ಹಂತದಲ್ಲಿ ಗಿಲ್ ಪ್ರಯೋಗಿಸಿದ ಅವಸರದ ಹೊಡೆತದಿಂದಾಗಿ ಬೃಹತ್ ಮೊತ್ತದ ನಿರೀಕ್ಷೆಗೆ ಕಡಿವಾಣ ಬಿತ್ತು. ಬಷೀರ್ ಎಸೆತವನ್ನು ಸಿಕ್ಸರ್ಗೆ ಎತ್ತುವ ಪ್ರಯತ್ನದಲ್ಲಿ ಗಿಲ್ ಬೌಂಡರಿ ಲೈನ್ ಫೀಲ್ಡರ್ಗೆ ಕ್ಯಾಚ್ ಆದರು. 147 ರನ್ ಗಳಿಸಿದ್ದ ಗಿಲ್ ನಿರ್ಗಮಿಸಿದರು. ಕ್ರೀಸ್ನಲ್ಲಿದ್ದ ಪಂತ್ ಒಂದಿಷ್ಟು ಬೀಸಾಟವಾಡಿದರು. ನಂತರ ಅವರೂ ಔಟಾದರು.

ಎಂಟು ವರ್ಷಗಳ ನಂತರ ತಂಡಕ್ಕೆ ಮರಳಿರುವ ಕರುಣ್ ನಾಯರ್ ಖಾತೆ ತೆರೆಯಲಿಲ್ಲ. ಕೆಳಕ್ರಮಾಂಕದ ಬ್ಯಾಟರ್ಗಳು ಹೆಚ್ಚು ಹೊತ್ತು ಆಡಲಿಲ್ಲ. ಅದರಿಂದಾಗಿ 113 ಓವರ್ಗಳಲ್ಲಿ 471 ರನ್ಗಳಿಗೆ ಭಾರತದ ಇನಿಂಗ್ಸ್ಗೆ ತೆರೆಬಿತ್ತು. ಮೂವರು ಬ್ಯಾಟರ್ಗಳು ಶತಕ ಬಾರಿಸಿದರೂ ದಾಖಲಾದ ಕಡಿಮೆ ಇನಿಂಗ್ಸ್ ಮೊತ್ತ ಇದಾಗಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಜೋಶ್ ಟಂಗ್ ಅವರು ತಲಾ ನಾಲ್ಕು ವಿಕೆಟ್ ಗಳಿಸಿದರು.

ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸುವ ಮುನ್ನ ಮಳೆ ಬಂದ ಕಾರಣ ತುಸು ವಿಳಂಬವಾಗಿ ಆಟ ಆರಂಭವಾಯಿತು. ಪಂದ್ಯ ಶುರುವಾದ ಮೊದಲ ಓವರ್ನಲ್ಲಿಯೇ ಜಸ್ಪ್ರೀತ್ ಬೂಮ್ರಾ ಅವರು ಜ್ಯಾಕ್ ಕ್ರಾಲಿ ವಿಕೆಟ್ ಕಬಳಿಸಿದರು.

ಆದರೆ ಬೆನ್ ಡಕೆಟ್ (ಬ್ಯಾಟಿಂಗ್ 53) ಮತ್ತು ಒಲಿ ಪೋಪ್ (ಬ್ಯಾಟಿಂಗ್ 48) ತಂಡದ ಕುಸಿತಕ್ಕೆ ಆಸ್ಪದ ನೀಡದೇ ಚೆಂದದ ಇನಿಂಗ್ಸ್ ಕಟ್ಟಿದರು. ಮರುಹೋರಾಟಕ್ಕೆ ಬಲ ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.