ನವದೆಹಲಿ: 'ಆಪರೇಷನ್ ಸಿಂಧೂರ' ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಇಂದು (ಮಂಗಳವಾರ) ನಡೆದ ಕಾವೇರಿದ ಚರ್ಚೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಾಯ್ತಪ್ಪಿನಿಂದ 'F' ಪದ ಬಳಕೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈ ಸಂಬಂಧ ಸುದ್ದಿ ಸಂಸ್ಥೆ 'ಎಎನ್ಐ' ವಿಡಿಯೊ ಹಂಚಿಕೊಂಡಿದೆ.

ರಾಹುಲ್ ಹೇಳಿದ್ದೇನು?

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಕೇಂದ್ರ ಸರ್ಕಾರದ ನಿಲುವುಗಳನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

'ಏನಾಯಿತು ಅಂದರೆ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಭಾರತ ಸರ್ಕಾರ ಅಂದುಕೊಂಡಿತ್ತು. ಬಳಿಕ ಯುದ್ಧಕ್ಕಿಳಿದಾಗ ಹಠಾತ್ ಆಗಿ ಪಾಕಿಸ್ತಾನ ವಿರುದ್ಧ ಮಾತ್ರವಲ್ಲದೇ ಚೀನಾ ವಿರುದ್ಧವೂ ಹೋರಾಡುತ್ತಿದ್ದೇವೆ ಎಂಬುದು ಮನವರಿಕೆಯಾಯಿತು' ಎಂದು ಹೇಳಿದ್ದಾರೆ.

'ಫೈಟಿಂಗ್ ಪಾಕಿಸ್ತಾನ' ಎಂಬ ಪದ ಬಳಕೆ ಮಾಡುವಾಗ ರಾಹುಲ್ ಅವರಿಂದ ಬಾಯ್ತಪ್ಪಿನಿಂದ 'F' ಪದ ಬಳಕೆಯಾಗಿದೆ. ಕೂಡಲೇ ಪದ ಬಳಕೆಯನ್ನು ಸರಿಪಡಿಸಿದ್ದಾರೆ.
.ಆಪರೇಷನ್ ಸಿಂಧೂರ: ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ.ಭಯೋತ್ಪಾದನೆ ವಿರುದ್ಧ ಕ್ರಮ; ಯಾವ ದೇಶವೂ ಭಾರತವನ್ನು ತಡೆದಿಲ್ಲ: ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.