ಕ್ರೈಸ್ಟ್‌ಚರ್ಚ್: ಎಡಗೈ ಬ್ಯಾಟ್ಸ್‌ಮನ್ ಲಿಯೊ ಕಾರ್ಟರ್ ಅವರು ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.

ಇಲ್ಲಿನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆದ ಸೂಪರ್ ಸ್ಮ್ಯಾಷ್ ದೇಶಿ ಟ್ವೆಂಟಿ–20 ಟೂರ್ನಿಯಲ್ಲಿ ಕಾರ್ಟರ್ ಅವರಿಂದ ಈ ಸಾಧನೆ ಮೂಡಿಬಂದಿದೆ.

ಕ್ಯಾಂಟರ್‌ಬರಿ ಕಿಂಗ್ಸ್ ತಂಡದ ಕಾರ್ಟರ್, ಭಾನುವಾರ ನಡೆದ ನಾರ್ತರ್ನ್ ನೈಟ್ಸ್ ಎದುರಿನ ಪಂದ್ಯದಲ್ಲಿ ಗರ್ಜಿಸಿದರು.

ಎಡಗೈ ಸ್ಪಿನ್ನರ್ ಆ್ಯಂಟೊನ್ ಡೇವ್‌ಸಿಚ್ ಹಾಕಿದ ಪಂದ್ಯದ 16ನೇ ಓವರ್‌ನ ಆರು ಎಸೆತಗಳನ್ನೂ ಅವರು ಸಿಕ್ಸರ್‌ಗೆ ಅಟ್ಟಿ ಈ ದಾಖಲೆ ಬರೆದ ನ್ಯೂಜಿಲೆಂಡ್‌ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಸಾಧನೆ ಮಾಡಿದ ವಿಶ್ವದ ಒಟ್ಟಾರೆ ಏಳನೇ ಬ್ಯಾಟ್ಸ್‌ಮನ್ ಎಂಬ ಶ್ರೇಯವೂ ಅವರದ್ದಾಯಿತು. ಟ್ವೆಂಟಿ–20 ಮಾದರಿಯಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್ ಅವರಾದರು. ಯುವರಾಜ್ ಸಿಂಗ್ (ಭಾರತ; 2007), ರಾಸ್ ವೈಟ್‌ಲೀ (ಇಂಗ್ಲೆಂಡ್; 2017) ಮತ್ತು ಹಜರತ್‌ಉಲ್ಲಾ ಜಜಾಯ್ (ಅಫ್ಗಾನಿಸ್ತಾನ; 2018) ಅವರು ಮೊದಲು ಈ ದಾಖಲೆ ನಿರ್ಮಿಸಿದ್ದರು.

ಭಾರತದ ರವಿಶಾಸ್ತ್ರಿ ಹಾಗೂ ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್ ಅವರು ಪ್ರಥಮ ದರ್ಜೆಯಲ್ಲಿ, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಅವರು ಅಂತರರಾಷ್ಟ್ರೀಯ ಏಕದಿನ ಮಾದರಿಯ ಪಂದ್ಯದಲ್ಲಿ ಆರು ಸಿಕ್ಸರ್ ಸಿಡಿಸಿದ್ದರು.

25 ವರ್ಷದ ಕಾರ್ಟರ್, ಈ ಪಂದ್ಯದಲ್ಲಿ 29 ಎಸೆತಗಳಲ್ಲಿ 70ರನ್ ಬಾರಿಸಿದರು. ಟ್ವೆಂಟಿ–20ಯಲ್ಲಿ ಅವರು ದಾಖಲಿಸಿದ ಚೊಚ್ಚಲ ಅರ್ಧಶತಕ ಇದಾಗಿದೆ. ಅವರ ಸ್ಫೋಟಕ ಆಟದ ಬಲದಿಂದ ಕ್ಯಾಂಟರ್‌ಬರಿ ತಂಡ ನಾರ್ತರ್ನ್ ನೈಟ್ಸ್ ನೀಡಿದ್ದ 220ರನ್‌ಗಳ ಗೆಲುವಿನ ಗುರಿಯನ್ನು ಏಳು ಎಸೆತಗಳು ಬಾಕಿ ಇರುವಂತೆಯೇ ಕ್ರಮಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.