ಶನಿವಾರ, ಆಗಸ್ಟ್ 20, 2022
21 °C

ಮರಡೋನಾಗೆ ಗೌರವ; ಮೆಸ್ಸಿಗೆ ದಂಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾರ್ಸಿಲೋನಾ (ಎಪಿ): ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಡಿಯೇಗೊ ಮರಡೋನಾ ಅವರ ನಿಧನಕ್ಕೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದ ಲಯೊನೆಲ್ ಮೆಸ್ಸಿ ಈಗ ಸ್ಪಾನಿಷ್ ಸಾಕರ್ ಫೆಡರೇಷನ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಅವರಿಗೆ ₹ 54 ಸಾವಿರ ದಂಡ ವಿಧಿಸಿದೆ.

ಹೋದ ಭಾನುವಾರ ಸ್ಪಾನಿಷ್ ಲೀಗ್‌ ಫುಟ್‌ಬಾಲ್‌ನಲ್ಲಿ ಮೆಸ್ಸಿ ಪ್ರತಿನಿಧಿಸುವ ಬಾರ್ಸಿಲೋನಾ ತಂಡವು 4–0 ಗೋಲುಗಳಿಂದ ಒಸಾಸುನಾ ವಿರುದ್ಧ ಗೆದ್ದಿತ್ತು. ಪಂದ್ಯದ ನಂತರ ಮೆಸ್ಸಿ ತಮ್ಮ ಕ್ಲಬ್‌ನ ನೀಲಿ–ಕಂದು ಬಣ್ಣಗಳಿರುವ ಜೆರ್ಸಿಯನ್ನು ತೆಗೆದಿದ್ದರು. ಅದರೊಂದಿಗೆ ತಾವು ಧರಿಸಿದ್ದ ಇನ್ನೊಂದು ಕೆಂಪು ಮತ್ತು ಕಪ್ಪು ಬಣ್ಣಗಳ ಸಂಯೋಜನೆಯಿದ್ದ  ಜೆರ್ಸಿಯನ್ನು ಪ್ರದರ್ಶಿಸಿದ್ದರು. ಅದು ಮರಡೋನಾ ಅವರು ನೆವೆಲ್ಸ್‌ ಓಲ್ಡ್‌ ಬಾಯ್ಸ್‌ ಕ್ಲಬ್‌ನಲ್ಲಿ ಧರಿಸಿ ಆಡಿದ್ದ ಜೆರ್ಸಿಯಾಗತ್ತು. 

ಅದರ ಮೇಲೆ ’ಡಿಯೆಗೊಗೆ ಬೀಳ್ಕೊಡುಗೆ‘ ಎಂದು ಬರೆಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು