ಭಾನುವಾರ, ಮೇ 9, 2021
26 °C

ಭ್ರಷ್ಟಾಚಾರ: ಲೋಕುಹೆಟ್ಟಿಗೆಗೆ 8 ವರ್ಷ ನಿಷೇಧ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಭ್ರಷ್ಟಾಚಾರ ಆರೋಪದ ಮೇಲೆ ಶ್ರೀಲಂಕಾದ ಮಾಜಿ ವೇಗದ ಬೌಲರ್ ದಿಲ್ಹಾರ ಲೋಕುಹೆಟ್ಟಿಗೆ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಎಂಟು ವರ್ಷಗಳ ನಿಷೇಧ ಹೇರಿದೆ. ಶ್ರೀಲಂಕಾದ ಆಟಗಾರರು ಒಬ್ಬರ ಹಿಂದೆ ಒಬ್ಬರಾಗಿ ಭ್ರಷ್ಟಾಚಾರ ಆರೋಪದ ಮೇಲೆ ಇತ್ತೀಚೆಗೆ ನಿಷೇಧಕ್ಕೆ ಒಳಗಾಗುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಲೋಕುಹೆಟ್ಟಿಗೆ.

40 ವರ್ಷದ ಲೋಕುಹೆಟ್ಟಿಗೆ 2005ರಿಂದ 2013ರ ವರೆಗೆ ಒಂಬತ್ತು ಅಂತರರಾಷ್ಟ್ರೀಯ ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದು ಎರಡು ವರ್ಷಗಳ ವಿಚಾರಣೆಯ ನಂತರ ಅವರ ಮೇಲೆ ಐಸಿಸಿ ಮೂರು ದೋಷಾರೋಪಗಳನ್ನು ಹೊರಿಸಿದೆ. ತನಿಖೆಗೆ ಸಹಕಾರ ನೀಡದ ಕಾರಣ ಶಿಕ್ಷೆಯನ್ನು ಹೆಚ್ಚು ಕಠಿಣಗೊಳಿಸಲಾಗಿದೆ ಎಂದು ತಿಳಿಸಿದೆ. ಅವರ ಮೇಲಿನ ನಿಷೇಧ 2019ರಿಂದ ಪೂರ್ವಾನ್ವಯವಾಗಲಿದೆ.

ಯುಎಇಯ ಶಾರ್ಜಾದಲ್ಲಿ ನಡೆದಿದ್ದ ಟಿ10 ಟೂರ್ನಿಯೊಂದರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಲೋಕುಹೆಟ್ಟಿಗೆ ಭಾಗಿಯಾಗಿದ್ದು, ಆಟಗಾರರನ್ನು ನೇರವಾಗಿ ಸಂಪರ್ಕಿಸಿದ ಆರೋಪ ಅವರ ಮೇಲಿತ್ತು.‌ ಇದೇ ಟೂರ್ನಿಯಲ್ಲಿ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದ ಮೇಲೆ ಲಂಕಾದ ನುವಾನ್ ಜೋಯ್ಸಾ ತಪ್ಪಿತಸ್ಥ ಎಂದು ಕಳೆದ ನವೆಂಬರ್‌ನಲ್ಲಿ ಸಾಬೀತಾಗಿತ್ತು. 

ಭ್ರಷ್ಟಾಚಾರ ಆರೋಪದ ಮೇಲೆ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರ ಮೇಲೆ 2019ರಲ್ಲಿ ಎರಡು ವರ್ಷ ನಿಷೇಧ ಹೇರಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು