ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಪಿಎಲ್‌: ಲಖನೌ ಫ್ರಾಂಚೈಸ್‌ಗೆ ‘ಯುಪಿ ವಾರಿಯರ್ಸ್’ ನಾಮಕರಣ

Last Updated 11 ಫೆಬ್ರುವರಿ 2023, 4:47 IST
ಅಕ್ಷರ ಗಾತ್ರ

ಲಖನೌ: ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿರುವ ಲಖನೌ ಫ್ರಾಂಚೈಸ್‌ ತಂಡವನ್ನು ಯುಪಿ ವಾರಿಯರ್ಸ್ ಎಂದು ಕರೆಯಲಾಗುತ್ತದೆ.

ಮೊದಲ ಬಾರಿ ನಡೆಯಲಿರುವ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ಐದು ತಂಡಗಳಲ್ಲಿ ಯುಪಿ ವಾರಿಯರ್ಸ್ ಕೂಡ ಒಂದಾಗಿದೆ. ಬಿಸಿಸಿಐ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಕಂಪನಿಯು ಈ ತಂಡವನ್ನು ₹ 757 ಕೋಟಿಗೆ ಖರೀದಿಸಿತ್ತು.

ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಜಾನ್ ಲೆವಿಸ್‌ ಅವರನ್ನು ಯುಪಿ ವಾರಿಯರ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಶ್ಲಿ ನೊಫ್ಕೆ ಬೌಲಿಂಗ್‌ ಕೋಚ್‌ ಮತ್ತು ಮಾಜಿ ಆಟಗಾರ್ತಿ ಲಿಸಾ ಸ್ಥಲೇಕರ್ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT