ಬುಲವಾಯೊ: ದಕ್ಷಿಣ ಆಫ್ರಿಕಾ ತಂಡದ ಹಂಗಾಮಿ ನಾಯಕ ಕೇಶವ್ ಮಹಾರಾಜ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಗಳಿಸಿದರು. ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜಿಂಬಾಬ್ವೆ ಎದುರು ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಅವರು ಮೂರು ವಿಕೆಟ್ ಪಡೆದರು. ಅವರ ಮತ್ತು ವಿಯಾನ್ ಮಲ್ದರ್ (50ಕ್ಕೆ4) ಅಮೋಘ ಬೌಲಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 167 ರನ್ಗಳ ಮುನ್ನಡೆ ಸಾಧಿಸಿತು.

ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 418 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಜಿಂಬಾಬ್ವೆ 67.4 ಓವರ್ಗಳಲ್ಲಿ 251 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಆತಿಥೇಯ ತಂಡದ ಸೀನ್ ವಿಲಿಯಮ್ಸ್ (137; 164ಎ, 4X16) ಶತಕ ಹೊಡೆದರು. ಅವರ ಏಕಾಂಗಿ ಹೋರಾಟಕ್ಕೆ ಇನಿಂಗ್ಸ್ ಮುನ್ನಡೆಯ ಫಲ ದೊರೆಯಲಿಲ್ಲ.

ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ 13 ಓವರ್ಗಳಲ್ಲಿ 1 ವಿಕೆಟ್ಗೆ 49 ರನ್ ಗಳಿಸಿತು. ಇದರೊಂದಿಗೆ ಒಟ್ಟು 216 ರನ್ ಮುನ್ನಡೆ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 90 ಓವರ್ಗಳಲ್ಲಿ 9ಕ್ಕೆ418. ಜಿಂಬಾಬ್ವೆ: 67.4 ಓವರ್ಗಳಲ್ಲಿ 251 (ಸೀನ್ ವಿಲಿಯಮ್ಸ್ 137, ಕ್ರೇಗ್ ಇರ್ವಿನ್ 36, ಕೊಡಿ ಯೂಸುಫ್ 42ಕ್ಕೆ3, ವಿಯಾನ್ ಮಲ್ದರ್ 50ಕ್ಕೆ4, ಕೇಶವ್ ಮಹಾರಾಜ್ 70ಕ್ಕೆ3) ಎರಡನೇ ಇನಿಂಗ್ಸ್: 13 ಓವರ್ಗಳಲ್ಲಿ 1 ವಿಕೆಟ್ಗೆ 49 (ಟೋನಿ ಡಿ ಝಾರ್ಜಿ ಬ್ಯಾಟಿಂಗ್ 22, ವಿಯಾನ್ ಮಲ್ದರ್ ಬ್ಯಾಟಿಂಗ್ 25)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.