ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜ ಟ್ರೋಫಿ ಟ್ವೆಂಟಿ-20 ಕ್ರಿಕೆಟ್: ಮಯಂಕ್‌ ಅಬ್ಬರ: ಬೆಂಗಳೂರಿಗೆ ಜಯ

ರೋನಿತ್ ಮೋರೆ ಮಾರಕ ಬೌಲಿಂಗ್ ದಾಳಿ
Last Updated 9 ಆಗಸ್ಟ್ 2022, 5:25 IST
ಅಕ್ಷರ ಗಾತ್ರ

ಮೈಸೂರು: ಅರ್ಧಶತಕ ಗಳಿಸಿದ ನಾಯಕ ಮಯಂಕ್‌ ಅಗರ್‌ವಾಲ್‌ ಹಾಗೂ ಶಿಸ್ತಿನ ಬೌಲಿಂಗ್‌ ಮಾಡಿದ ರೋನಿತ್‌ ಮೋರೆ ನೆರವಿನಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಜಯಗಳಿಸಿತು.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಮಹಾರಾಜ ಟ್ರೋಫಿ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 54 ರನ್‌ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡವನ್ನು ಸೋಲಿಸಿತು.

ಟಾಸ್‌ ಗೆದ್ದ ಗುಲ್ಪರ್ಗ ತಂಡದ ನಾಯಕ ಮನೀಷ್‌ ಪಾಂಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬೆಂಗಳೂರು ತಂಡದ ಮಯಂಕ್‌ ಹಾಗೂ ಎಲ್‌.ಆರ್‌.ಚೇತನ್‌ ಮೊದಲ 5 ಓವರ್‌ಗಳಲ್ಲಿ 61 ರನ್‌ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ189 ರನ್‌ ಗಳಿಸಿತು. ಅದಕ್ಕುತ್ತರವಾಗಿ ಗುಲ್ಬರ್ಗ ತಂಡಕ್ಕೆ 20 ಓವರ್‌ಗಳಲ್ಲಿ 135 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಮಯಂಕ್ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 52 ರನ್‌ ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ 8 ರನ್‌ಗಳಿಂದ ಮೈಸೂರು ವಾರಿಯರ್ಸ್ ಎದುರು ಗೆದ್ದಿತು.

ಸಂಕ್ಷಿಪ್ತ ಸ್ಕೋರ್‌: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 8ಕ್ಕೆ 189 (ಮಯಂಕ್‌ ಅಗರ್‌ವಾಲ್‌ 52, ಕೆ.ವಿ.ಅನಿಷ್‌ 44, ಕ್ರಾಂತಿ ಕುಮಾರ್‌ 22. ವಿದ್ವತ್‌ ಕಾವೇರಪ್ಪ 35ಕ್ಕೆ 2, ರಿತೇಶ್‌ ಭಟ್ಕಳ್ 18ಕ್ಕೆ 2)ಗುಲ್ಬರ್ಗ ಮಿಸ್ಟಿಕ್ಸ್: 20 ಓವರ್‌ಗಳಲ್ಲಿ 135 (ಮನೋಜ್‌ ಭಾಂಡಗೆ 35, ಕೆ.ಎಲ್‌.ಶ್ರೀಜಿತ್ 25, ದೇವದತ್ ಪಡಿಕ್ಕಲ್‌ 18. ರೋನಿತ್‌ ಮೋರೆ 22ಕ್ಕೆ 4, ಕುಮಾರ್‌ 12ಕ್ಕೆ 2)

ಫಲಿತಾಂಶ: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ಗೆ 54 ರನ್‌ ಗೆಲುವು.

ಪಂದ್ಯಶ್ರೇಷ್ಠ: ಮಯಂಕ್‌ ಅಗರ್‌ವಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT