ಸೋಮವಾರ, ಮೇ 17, 2021
21 °C

ಭಾರತ ಪುಟಿದೇಳುವ ಭರವಸೆ ಇಲ್ಲ: ಮಾರ್ಕ್ ವಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಅಡಿಲೇಡ್ ಆಘಾತದಿಂದ ಭಾರತ ತಂಡವು ಹೊರಬರುವುದು ಕಷ್ಟ. ಆಸ್ಟ್ರೇಲಿಯಾದ ಎದುರು 0–4ರ ವೈಟ್‌ವಾಷ್ ಅನುಭವಿಸುವ ಸಾಧ್ಯತೆಯೇ ಹೆಚ್ಚಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮಾರ್ಕ್ ವಾ ಅಭಿಪ್ರಾಯಪಟ್ಟಿದ್ದಾರೆ.

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನುಭಸಿತ್ತು. ಈ ಕುರಿತು ಫಾಕ್ಸ್ ಕ್ರಿಕೆಟ್‌ ಸಂವಾದದಲ್ಲಿಮಾರ್ಕ್‌ ಮಾತನಾಡಿದರು.

’ಭಾರತ ತಂಡವು ಪುಟಿದೇಳುವ ಯಾವ ಭರವಸೆಯೂ ನನಗಿಲ್ಲ. ವಿರಾಟ್ ಕೊಹ್ಲಿ ಬಳಗವು ಅಡಿಲೇಡ್‌ ಟೆಸ್ಟ್‌ನಲ್ಲಿ ಜಯಿಸುವ ನಿರೀಕ್ಷೆ ನನಗಿತ್ತು. ಆದರೆ ಅದೇ ಪಂದ್ಯದ ಮೂರನೇ ದಿನವೇ ಆಘಾತ ಅನುಭವಿಸಿತು. ಅದನ್ನು ನೋಡಿದರೆ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ 4–0ಯ ಜಯದ ಸಾಧ್ಯತೆಯೇ ಹೆಚ್ಚು‘ ಎಂದರು.

ಮಾಜಿ ವಿಕೆಟ್‌ಕೀಪರ್ ಬ್ರಾಡ್ ಹೆಡಿನ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು